
ಬಂಟ್ವಾಳ: ಸಜೀಪಮೂಡ ಗ್ರಾಮದ ಕಾಂತಾಡಿ ಗುತ್ತು ದಿ.ಐತಪ್ಪ ರೈ ಮತ್ತು ಬಾವಂತ ಕೋಡಿ ದಿ. ದೈಯಕ್ಕೂ ರೈ ಅವರ ಮೂರನೇ ಸುಪುತ್ರಿ, ಮಂಗಜೆ ದಿ.ರಘುನಾಥ ಶೆಟ್ಟಿಯವರ ಧರ್ಮಪತ್ನಿ ಶತಾಯುಷಿ ಬಾವಂತಕೋಡಿ ಲಕ್ಷ್ಮೀ ಆರ್. ಶೆಟ್ಟಿಯವರ ಜನ್ಮಶತಮಾನೋತ್ಸವವನ್ನು ಸಜೀಪಮೂಡ ಗ್ರಾಮದ ಕೊಯಮಜಲು ಮನೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ನೂರು ವರ್ಷವನ್ನು ಪೂರೈಹಿಸಿದ ಹಿನ್ನಲೆಯಲ್ಲಿ ಲಕ್ಷ್ಮಿ ಆರ್.ಶೆಟ್ಟಿಯವರ ಮಕ್ಕಳು, ಮರಿಮಕ್ಕಳು, ಅಳಿಯ, ಸೊಸೆಯಂದಿರು ಹಾಗೂ ಬಂಧು ಮಿತ್ರರು ಹುಟ್ಟು ಹಬ್ಬದ ಆಚರಣೆಯನ್ನು ಸಂಭ್ರಮಿಸಿದರು.
ನೂರನೇ ಹುಟ್ಟುಹಬ್ಬ ಕಾರ್ಯಕ್ರಮದ ಅಂಗವಾಗಿ
ಹಿಂದೂ ಸಂಸ್ಕೃತಿ ಮಂದಿರ ರಾಮ ಧಾಮ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಸುಭಾಷ್ ನಗರ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಮೃತ್ಯಂಜಯ ಶಾಂತಿ ಹೋಮ, ಪವಮಾನ ಹೋಮ ನಡೆಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ನೂರನೇ ಜನ್ಮ ದಿನವನ್ನು ಆಚರಿಸುತ್ತಿರುವ ಲಕ್ಷ್ಮೀ ಆರ್.ಶೆಟ್ಟಿಯವರನ್ನು ಶಾಲು, ಹಾರ ತೊಡಿಸಿ, ಫಲಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭ ಗಣ್ಯರಾದ
ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ ಶೆಟ್ಟಿ ಯಾನೆ ದುಗ್ಗ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ ಮತ್ತು ಪದ್ಮನಾಭ ಕೊಟ್ಟಾರಿ, ವೈದ್ಯರಾದ ಡಾ.ವಿಶ್ವನಾಥ್ ನಾಯಕ್ ಪಾಣೆಮಂಗಳೂರು, ವೇದಮೂರ್ತಿ ವಿಷ್ಣುಮೂರ್ತಿ ಮಯ್ಯ ಕೊಳಕೆ, ರಾಧಾಕೃಷ್ಣ ಆಳ್ವ ಕಂಚಿಲ, ನಗ್ರಿಗುತ್ತು ವಿವೇಕ ಶೆಟ್ಟಿ
ಶ್ರೀಕಾಂತ್ ಶೆಟ್ಟಿ ಸಂಕೇಶ ಶುಭಹಾರೈಸಿದರು.
ಲಕ್ಷ್ಮೀ ಆರ್. ಶೆಟ್ಟಿಯವರ ಮಕ್ಕಳಾದ ವಸಂತ್ ಶೆಟ್ಟಿ, ಜಯಂತ್ ಶೆಟ್ಟಿ, ರಜನಿ ಹೆಗ್ಡೆ, ಸುರೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಹರೀಶ್ ಶೆಟ್ಟಿ ,ಅಳಿಯ ರಂಗನಾಥ್ ಹೆಗ್ಡೆ, ಸೊಸೆಯಂದಿರಾದ ಮಾಲಿನಿ ಶೆಟ್ಟಿ, ರತ್ನಾವತಿ ಶೆಟ್ಟಿ,ವೀಣಾ ಶೆಟ್ಟಿ,ಅಮಿತಾ ಶೆಟ್ಟಿ, ರಶ್ಮಿ ಶೆಟ್ಟಿ ಮೊಮ್ಮಕ್ಕಳಾದ ರಜತ್ ಶೆಟ್ಟಿ, ಶರಣ್ ಶೆಟ್ಟಿ, ಶ್ರವಣ ಶೆಟ್ಟಿ , ಆಶಿತಾ ಸುಮಂತ್ ಶೆಟ್ಟಿ ಮತ್ತು ಸುಪ್ರಜ್ ಶೆಟ್ಟಿ ಮಾತು ಶೈನಿ ಹೆಗ್ಡೆ ಮತ್ತು ಮರಿ ಮೊಮ್ಮಕ್ಕಳಾದ ರೋನಿತ್ ಹೆಗಡೆ ಉಪಸ್ತಿತರಿದ್ದರು. ಕುಮಾರ್ ಮಾಲೆಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು


Advertisement







