
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮ.ಪಂ. ನಲ್ಲಿ ಶೂನ್ಯ ಕಸ ನಿರ್ವಹಣೆ ಸ್ವಚ್ಚ ಮನೆ ಸ್ವಯಂ ಘೋಷಣೆ ಮೂಲಕ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಗ್ರಾಮ.ಪಂ. ಅಧಿಕಾರಿಗಳು ಹಾಗೂ ಝೇಂಕಾರ ಸಂಜೀವಿನಿ ಒಕ್ಕೂಟ ಸಂಕಲ್ಪ ಮಾಡಿದೆ.
ಗ್ರಾ.ಪಂ. ಎನ್ ಆರ್ ಎಲ್ ಎಮ್ ತರಬೇತಿ ಕೇಂದ್ರ ದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಶೂನ್ಯ ಕಸ ನಿರ್ವಹಣೆ ಮತ್ತು ಸ್ವಚ್ಚತೆಯ ವಿಶೇಷ, ಮಾಹಿತಿ ಮತ್ತು ಪ್ರೇರಣಾ ಕಾರ್ಯಕ್ರಮ ದಲ್ಲಿ ಭಾಗವಹಿದ್ದ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಪ್ಲಾಸ್ಟಿಕ್ ಮತ್ತು ಸ್ಯಾನಿಟರಿ ಪ್ಯಾಡ್ ತ್ಯಾಜ್ಯಗಳಿಂದ ಸೃಷ್ಟಿ ಯಾಗಿರವ ಬಯಲು ಕಸಾಲಯ , ಪ್ಲಾಸ್ಟಿಕ್ ಬೆಂಕಿ, ಪ್ಲಾಸ್ಟಿಕ್ ಮಾಲಿನ್ಯ ತಡೆದು ಸುಸ್ಥಿರ ಸ್ವಚ್ಛತೆ ಸಾಧಿಸಲು ಶೂನ್ಯ ಕಸ ನಿರ್ವಹಣೆ ಸ್ವಚ್ಛ ಮನೆ ಸ್ವಯಂ ಘೋಷಣೆ ಸುಸ್ಥಿರ ಪರಿಹಾರೋಪಾಯ ಆಗಿದೆ ಎಂದರು. ಹಸಿ ಕಸಗಳಿಂದ ಬಯೋ ಗ್ಯಾಸ್ ಅಳವಡಿಸಿ ಕೊಳ್ಳುವ ಕುಟುಂಬಗಳಿಗೆ ಪಂಚಾಯತಿ ವತಿಯಿಂದ ಸರ್ವ ಸಹಕಾರ ನೀಡುವುದಾಗಿ ಪಿಡಿಒ ಗೋಕುಲ್ ದಾಸ್ ಭಕ್ತ ತಿಳಿಸಿದರು. ಒಂದು ಅರ್ಹ ಕುಟುಂಬಕ್ಕೆ ತನ್ನ ವತಿಯಿಂದಲೇ ಬಯೋ ಗ್ಯಾಸ್ ಘಟಕ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಈಗಾಗಲೇ ಬಯೋ ಗ್ಯಾಸ್ ನಿರ್ಮಿಸಿ ಕೊಂಡು ಶೂನ್ಯ ಕಸ ನಿರ್ವಹಣೆ ಮೂಲಕ ಸ್ವಚ್ಚತೆ ಸಾಧಿಸಿರುವ ಸಂಜೀವಿನಿ ಒಕ್ಕೂಟ ಎಮ್ ಬಿ ಕೆ ಸುನಿತಾರವರನ್ನು ಗೌರವಿಸಲಾಯಿತು. ಒಕ್ಕೂಟದ 15 ಮಂದಿ ಸದಸ್ಯರು ಸ್ವಚ ಮನೆ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸಿದರು. ಇದೇ ತಿಂಗಳ 16ರಂದು ಸಂಜಜೀನಿ ಒಕ್ಕೂಟದ ಸದಸ್ಯರ ಮಹಾಸಭೆ ಏರ್ಪಡಿಸಿ ಶೂನ್ಯ ಕಸ ನಿರ್ವಹಣೆಯ ಅರಿವು ಮೂಡಿಸುವುದು, 10 ಮನೆಗಳಲ್ಲಿ ಮಿನಿ ಬಯೋ ಗ್ಯಾಸ್ ಘಟಕ ಗಳನ್ನು ಅಳವಡಿಸುವ ಬಗ್ಗೆ ತೀರ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಅಸೀಫ ಬೇಗಂ, ಸ್ವಚ್ಛ ವಾಹಿನಿ ಚಾಲಕಿ ಬಬಿತಾ, ಎಲ್ ಸಿ ಆರ್ ಪಿ ಲಾವಣ್ಯ ಗ್ರಾಮ.ಪಂ ಮಾಜಿ ಸದಸ್ಯ ಜಮಾಲ್ ಸಹಕರಿಸಿದರು.


Advertisement







