
ಬಂಟ್ವಾಳ: ಮಡಕ್ಕಿಲ ಬಂಜನ್ ಕುಟುಂಬದ ವಾರ್ಷಿಕ ಪರ್ವ ಸೇವೆ ಕುಟುಂಬದ ಮೂಲ ಮನೆಯಲ್ಲಿ ತನಿಯಪ್ಪ ಮೂಲ್ಯ ಅವರ ಉಪಸ್ಥಿತಿಯಲ್ಲಿ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಹಾಗೂ ಕುಟುಂಬ ಸದಸ್ಯರ ಭಾಗವಹಿಸುವಿಕೆಯಿಂದಿಗೆ ನಡೆಯಿತು.
ಬೆಳಿಗ್ಗೆ ಗಣ ಹೋಮ, ದೈವದ ಮುಡಿಪು ಕಟ್ಟುವ ಮೂಲಕ ದೇವತಾ ಕಾರ್ಯ ಜರಗಿತು. ಕುಟುಂಬದ ಸದಸ್ಯರಾದ ಅನಿಲ್ ಕುಮಾರ್ ಮತ್ತು ತನುಜ ಅವರ ಪುತ್ರಿ ಅಪೂರ್ವ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. 100 ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಕುಟುಂಬದ ಕ್ಷೇಮ ನಿಧಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಡಕ್ಕಿಲ ಕುಟುಂಬದ ಗೌರವ ಅಧ್ಯಕ್ಷ ತನಿಯಪ್ಪ ಮೂಲ್ಯ, ಅಧ್ಯಕ್ಷ ಸುರೇಶ್ ಬಂಗೇರ ಸಂಚಯಗಿರಿ ಉಪಾಧ್ಯಕ್ಷ ಬಾಲಕೃಷ್ಣ ರೇಷ್ಮೆರೋಡ್, ದಿನೇಶ್ ಬರ್ಕಾಜೆ, ಕೋಶಾಧಿಕಾರಿ ಗುರುಪ್ರಸಾದ್,ಜೊತೆ ಕಾರ್ಯದರ್ಶಿ ಸದಾನಂದ ಬ್ರಾಹ್ಮರಿ, ಪ್ರವೀಣ್ ಬಳ್ಳಮಂಜ, ವಾಸು ಮೂಲ್ಯ ಬಳ್ಳಮಂಜ ಉಪಸ್ಥಿತರಿದ್ದರು. ಸತೀಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.


Advertisement







