
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಯ ಬಂಟ್ವಾಳ ವಲಯದ ವತಿಯಿಂದ ವಲಯದ ಕುಟುಂಬ ಸದಸ್ಯರಿಗಾಗಿ ಕುಟುಂಬ ಸಮ್ಮಿಲನ ಹಾಗೂ ಆಟಿ ಕೂಟ ಕಾರ್ಯಕ್ರಮ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆಯಿತು.
ಜೇಸಿಐ ಬಂಟ್ವಾಳದ ಪೂರ್ವಧ್ಯಕ್ಷ ಸದಾನಂದ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ವಲಯಧ್ಯಕ್ಷ ರಾಜೇಂದ್ರ ಕೆ, ಸಂಪನ್ಮೂಲ ವ್ಯಕ್ತಿ ನಾಗರಾಜ್ ಬಜಾಲ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್ ,ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶರತ್ ಕಲ್ಲಡ್ಕ ಹಾಗೂ ಅಜಿತ್ ಬಂಟ್ವಾಳ ಉಪಸ್ಥಿತರಿದ್ದರು.
ಗೌರವಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ, ರವಿ ಕಲ್ಪನೆ ವಂದಿಸಿದರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.
Advertisement







