
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ಲೇಡಿ ಲಯನ್ಸ್ ಡೇ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಏಪ್ರಿಲ್ ತಿಂಗಳ ಮಾಸಿಕ ಸಭೆಯೊಂದಿಗೆ ಮಕ್ಕಳ , ಮಹಿಳೆಯರ ಹಾಗೂ ಲಯನ್ಸ್ ಕುಟುಂಬದ ಸದಸ್ಯರ ವಿವಿಧ ಒಳಾಂಗಣ ಆಟೋಟಗಳು, ಮನೋರಂಜನಾ ಸ್ಪರ್ಧೆಗಳೊಂದಿಗೆ ಕಾರ್ಯಕ್ರಮ ಬಹಳ ಆಕರ್ಷಕವಾಗಿ ಮೂಡಿ ಬಂತು.
ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಸೈಬರ್ ಲಾ ಬಗ್ಗೆ ಅನಂತ ಪ್ರಭು ಸೈಬರ್ ಕಳ್ಳರಿಂದ ನಾವು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಮುಂಜಾಗೃತೆ ಬಗ್ಗೆ ಮಾಹಿತಿ ನೀಡಿದರು.

ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್ ಹಾಗೂ ರೇಣುಕಾ ಅನಂತಕೃಷ್ಣ ರವರು ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಇತ್ತೀಚಿಗೆ ನಡೆದ ಜಿಲ್ಲಾ ಅಧಿವೇಶನದಲ್ಲಿ ಆಯ್ಕೆಯಾದ ಚುನಾಯಿತ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ, ಚುನಾಯಿತ ದ್ವಿತೀಯ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ , ಚುನಾವಣಾ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಪೂರ್ವ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಪೂರ್ವ ರಾಜ್ಯಪಾಲರಾದ ಸಂಜೀತ್ ಶೆಟ್ಟಿ ಯವರಿಗೆ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದ ಆತಿಥ್ಯ ನೀಡಿದ ಸುನೀಲ್ ಬಿ ಮತ್ತು ಸುಮಾ ಸುನೀಲ್ ದಂಪತಿಯನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ಡಾ.ಬಿ ವಸಂತ ಬಾಳಿಗಾ, ಕಾರ್ಯದರ್ಶಿ ದೇವಿಕಾ ದಾಮೋದರ್, ಕೋಶಾಧಿಕಾರಿ ದೇವಪ್ಪ ಪೂಜಾರಿ, ಲಿಯೋ ಅಧ್ಯಕ್ಷೆ ಖುಷಿ ಟಿ ಶೆಟ್ಟಿ ಉಪಸ್ಥಿತರಿದ್ದರು
Advertisement







