
ಬಂಟ್ವಾಳ: ಸೋಮವಾರ ರಾತ್ರಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆ ಸುರಿದಿದೆ.ಬಂಟ್ವಾಳ ಮೂಡ ಗ್ರಾಮದ ಅಲೆತ್ತೂರಿನಲ್ಲಿ ಸೋಮವಾರ ರಾತ್ರಿ ಗ್ರಾಮ ದೈವ ಪಂಜುರ್ಲಿ ದೈವದ ನೇಮೋತ್ಸವ ನಡೆದಿದ್ದು ಎಡೆಬಿಡದೆ ಸುರಿದ ಗಾಳಿ, ಮಿಂಚು, ಗುಡಿಗಿನ ಮಳೆಯನ್ನು ಲೆಕ್ಕಿಸದೆ ನೇಮೋತ್ಸವ ನಡೆದಿರುವುದು ಗಮನ ಸೆಳೆದಿದೆ.
ನೇಮೋತ್ಸವ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಮಳೆಯಲ್ಲೂ ನಡೆದ ಪಂಜುರ್ಲಿ ದೈವದ ನೇಮೋತ್ಸವ ವೀಕ್ಷಿಸಿ ಪುನೀತರಾದರು.

Advertisement







