
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಲಯನ್ಸ್ ಜಿಲ್ಲೆಯ ಪ್ರಾಂತ್ಯ 3ರ ಪ್ರಾಂತ್ಯಾಧ್ಯಕ್ಷ ಲಯನ್ ಯೂಜಿನ್ ಲೋಬೋ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.


ಲಯನ್ಸ್ ಜಿಲ್ಲಾ ಸಂಯೋಜಕ, ತರಬೇತುದಾರ ಲಯನ್ ವಿಜಯ ವಿಷ್ಣು ಮಯ್ಯ ಕ್ಲಬ್ ಓರಿಯೆಂಟೇಷನ್ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಾಂತ್ಯದ ಬೇರೆ ಬೇರೆ ಕ್ಲಬ್ ಗಳ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇವಾ ಕಾರ್ಯಕ್ರಮವಾಗಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು. ಪ್ರಾಂತ್ಯಾಧ್ಯಕ್ಷ ಯೂಜಿನ್ ಲೋಬೋ ಮಾತನಾಡಿ ಸೇವೆಯ ಮೂಲಕ ಸಂತೃಪ್ತಿಯನ್ನು ಕಾಣಬಹುದು. ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಿದಾಗ ವ್ಯಕ್ತಿತ್ವಕ್ಕೂ ಶೋಭೆ, ಸಂಸ್ಥೆಗೂ ಘನತೆ ಎಂದು ತಿಳಿಸಿದರು.
ಕ್ಲಬ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.


ಬಳಿಕ ಪ್ರಾಂತ್ಯಾಧ್ಯಕ್ಷ ಯೂಜಿನ್ ಲೋಬೋ ಹಾಗೂ ಪತ್ರಕರ್ತ ಸಂದೀಪ್ ಸಾಲ್ಯಾನ್ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಆತಿಥ್ಯ ನೀಡಿದ ಲಯನ್ ಕೃಷ್ಣಶ್ಯಾಮ್, ಸತ್ಯನಾರಾಯಣ ರಾವ್, ದುರ್ಗಾಪರಮೇಶ್ವರ ಭಟ್ ರವರಿಗೆ ಗೌರವಿಸಲಾಯಿತು.ಪ್ರಾಂತ್ಯದ ರಾಯಭಾರಿ ಕೃಷ್ಣ ಶ್ಯಾಮ್ , ವಲಯಾಧ್ಯಕ್ಷ ಉಮೇಶ್ ಪಿ ,ಪ್ರಾಂತ್ಯದ ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಲಯನ್ಸ್ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ದೇವಿಕಾ ದಾಮೋದರ್ , ಕೋಶಾಧಿಕಾರಿ ದೇವಪ್ಪ ಪೂಜಾರಿ , ಲಿಯೋ ಅಧ್ಯಕ್ಷೆ ಖುಷಿ ಟಿ ಶೆಟ್ಟಿ ಹಾಗೂ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಸ್ವಾಗತಿಸಿದರು, ಕಾರ್ಯದರ್ಶಿ ದೇವಿಕಾ ದಾಮೋದರ್ ವರದಿ ವಾಚಿಸಿದರು.ಮಾಜಿ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ವಂದಿಸಿದರು.
Advertisement







