
ಬಂಟ್ವಾಳ: ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಕ್ಲಬ್ ಅಮ್ಟೂರು ಇಲ್ಲಿಗೆ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ. ಇವರ ಅಧಿಕೃತ ಭೇಟಿ ಕಾರ್ಯಕ್ರಮ ಮಂಚಿಯಲ್ಲಿರುವ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರುವಿನ ಸಭಾಂಗಣದಲ್ಲಿ ನಡೆಯಿತು.
ಕ್ಲಬ್ ಸದಸ್ಯ, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿವರು ಕೊಡುಗೆಯಾಗಿ ನೀಡಿದ ಶೋಕೇಸ್ನ್ನು ಗವರ್ನರ್ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸುಮನ ಕ್ರಾಸ್ತ, ಮಹಮ್ಮದ್ ಶರೀಫ್, ಸಲೋಮಿ, ರಿಷಲ್, ರಿನೀಶ್ ಅವರನ್ನು ಸನ್ಮಾನಿಸಲಾಯಿತು. ಸೇವಾ ಕಾರ್ಯಕ್ರಮದ ಅಂಗವಾಗಿ ಅರ್ಹರಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಡಾ. ಗೋಪಾಲಾಚಾರ್ ಅವರು ನೀಡಿದ ಗಿಡಗಳು ಹಾಗೂ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಕೊಳ್ನಾಡು ಸಾಲೆತ್ತೂರಿನ ನೂತನ ಲಿಯೋ ಕ್ಲಬ್ ಉದ್ಘಾಟಿಸಲಾಯಿತು. ಸದಸ್ಯರನ್ನು ಘಟಕಕ್ಕೆ ಸೇರಿಸಿಕೊಳ್ಳಲಾಯಿತು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಲಯನ್ ವಸಂತ ಕುಮಾರ್ ಶೆಟ್ಟಿಯವರು ನೂತನವಾಗಿ ಅಸ್ಥಿತ್ವಕ್ಕೆ ಬಂದ ಲಿಯೋ ಕ್ಲಬ್ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣ ವಚನ ಭೋದಿಸಿದರು. ಅವರು ಮಾತನಾಡಿ ಎರಡು ಕ್ಲಬ್ಗಳು ಗ್ರಾಮೀಣ ಭಾಗದಲ್ಲಿ ಲಯನ್ಸ್ ನ ಹಿರಿಮೆ ಗರಿಮೆಯನ್ನು ಎತ್ತರಿಸಿದೆ. ಶಾಲೆಯ ಪಾಠದೊಂದಿಗೆ ನಾಯಕತ್ವ, ಸೇವಾ ಗುಣಗಳನ್ನು ಬೆಳೆಸಿಕೊಳ್ಳಲು ಲಿಯೋ ದಿಂದ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಗವರ್ನರ್ ಭಾರತಿ ಬಿ. ಎಂ. ಅವರು ಮಾತನಾಡಿ ಅಮ್ಟೂರು ಹೊಸ ಘಟಕವಾದರೂ ಅತ್ಯುತ್ತಮ ಕೆಲಸಗಳನ್ನು ಮಾಡಿ ಲಯನಿಸಂಗೆ ಉತ್ತಮ ಕೊಡುಗೆಗಳನ್ನು ನೀಡಿದೆ, ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಕೊಳ್ನಾಡು ಸಾಲೆತ್ತೂರು ಕ್ಲಬ್ ಮುನ್ನಡೆಯುತ್ತಿದೆ. ಸಮಾಜದ ಏಳಿಗೆಗಾಗಿ ಎಲ್ಲರೂ ನಿಸ್ವಾರ್ಥದಿಂದ ದುಡಿಯೋಣ ಎಂದರು.
ಎರಡೂ ಕ್ಲಬ್ಗಳಿಗೆ ತಲಾ ಒರ್ವ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು. ಎರಡೂ ಲಯನ್ಸ್ ಕ್ಲಬ್ಗಳ ವತಿಯಿಂದ ಗವರ್ನರ್ ಅವರನ್ನು ಗೌರವಿಸಲಾಯಿತು. ಪೂರ್ವ ಗವರ್ನರ್ಗಳಾದ ವಸಂತ್ ಕುಮಾರ್ ಶೆಟ್ಟಿ ಹಾಗೂ ಅರುಣ್ ಶೆಟ್ಟಿಯವರನ್ನು ಗೌರವಿಸಲಾಯಿತು. ಲಿಯೋ ಕ್ಲಬ್ ಕೊಳ್ನಾಡು ಸಾಲೆತ್ತೂರುವಿನ ನೂತನ ಅಧ್ಯಕ್ಷೆ ಅನಿಸಿಕೆ ವ್ಯಕ್ತಪಡಿಸಿದರು. ಎರಡೂ ಕ್ಲಬ್ನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯವರನ್ನು ಗವರ್ನರ್ ಗೌರವಿಸಿದರು.
ಜಿಲ್ಲಾ ಕಾರ್ಯದರ್ಶಿ ಗೀತಾ, ಪ್ರಾಂತೀಯ ಅಧ್ಯಕ್ಷ ಯೂಜಿನ್ ಲೋಬೋ
ವಲಯಾಧ್ಯಕ್ಚ ಸಂದೇಶ್ ಶೆಟ್ಟಿ, ಲಿಯೋ ಜಿಲ್ಲಾ ಅಧ್ಯಕ್ಷೆ ಸಮೀಕ್ಷಾ, ಕೋಶಾಧಿಕಾರಿ ಚಿತ್ತರಂಜ ಅಮ್ಟೂರು ಕ್ಲಬ್ ಕೋಶಾಧಿಕಾರಿ ಎಡ್ವಿನ್ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರುವಿನ ಅಧ್ಯಕ್ಷ ಯೋಗೀಶ್ ಆಳ್ವ ಸ್ವಾಗತಿಸಿದರು. ಎರಡೂ ಘಟಕಗಳ ಕಾರ್ಯದರ್ಶಿಗಳಾದ ರಾಮ್ ಪ್ರಸಾದ್ ರೈ ತಿರುವಾಜೆ , ಜೇಮ್ಸ್ ಮಾರ್ಟಿಸ್ ವರದಿ ವಾಚಿಸಿದರು. ಅಮ್ಟೂರು ಕ್ಲಬ್ ಅಧ್ಯಕ್ಷ ಎಡ್ವಿನ್ ನೊರೊನ್ಹೊ ವಂದಿಸಿದರು. ನೋಯೆಲ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.
Advertisement







