
ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಮಹಾಚಂಡಿಕಾ ಯಾಗ ನಡೆಯಿತು.

ಅಕ್ಟೋಬರ್ ೩ರಿಂದ ಶ್ರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆದು ವಿಜಯದಶಮಿಯ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ, ವೇದಮೂರ್ತಿ ಬಾಲಕೃಷ್ಣ ಆಚಾರ್ ಕಾರಿಂಜ ಅವರ ನೇತೃತ್ವದಲ್ಲಿ ಮಹಾಚಂಡಿಕಾ ಯಾಗ ನಡೆದು ಬೆಳಿಗ್ಗೆ ೧೧.೩೦ರ ವೇಳೆಗೆ ಪೂರ್ಣಾಹುತಿ ನಡೆಯಿತು. ಶ್ರೀ ರಕ್ತೇಶ್ವರೂ ದೇವಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಬಿ. ವಿಶ್ವನಾಥ, ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಮಹಾಚಂಡಿಕಾ ಯಾಗದ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ರಕ್ತೇಶ್ವರೀ ದೇವಿಗೆ ಮಹಾಪೂಜೆ ನಡೆದು ಅನ್ನದಾನ ನಡೆಯಿತು.



Advertisement







