
ಬಂಟ್ವಾಳ: ಸಂಕಷ್ಟದ ಕಾಲದಲ್ಲಿ ಕ್ಷಯ ರೋಗಿಗಳ ಕೈ ಹಿಡಿಯುವ ಕಾರ್ಯವನ್ನು ಕೇಂದ್ರ ಸರಕಾರದ ಮಾಡುತ್ತಿದ್ದು ಸೇವಾಂಜಲಿ ಸಂಸ್ಥೆ ಅದನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಸೇವಾಂಜಲಿಯ ಈ ಸೇವಾ ಕಾರ್ಯ ಸದ್ಬಳಕೆಯಾಗಬೇಕು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಕೈಕಂಬದ ಸೂರ್ಯವಂಶ ಫೌಂಡೇಶನ್ ಅಧ್ಯಕ್ಷ ಡಾ. ಗೋವರ್ಧನ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಉಳ್ಳವರು ಬಡವರಿಗೆ ನೀಡಿದಾಗ ಬಡತನ ನಿರ್ಮೂಲನವಾಗಲು ಸಾಧ್ಯವಿದೆ. ಅಂತಹ ಕಾರ್ಯವನ್ನು ಕೃಷ್ಣಕುಮಾರ್ ಪೂಂಜ ಅವರು ಮಾಡುತ್ತಿದ್ದಾರೆ ಎಂದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 46 ತಿಂಗಳುಗಳಿಂದ ಸೇವಾಂಜಲಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸುತ್ತಿದ್ದು ಈವರೆಗೆ ಒಟ್ಟು 16 ಲಕ್ಷ ರೂ. ಖರ್ಚು ಮಾಡಿ 245 ಮಂದಿ ಕ್ಷಯ ರೋಗಿಗಳಿಗೆ ವಿತರಿಸಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಮಾ ಗೋವರ್ಧನ್ ರಾವ್, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ನಾರಾಯಣ ಬಢ್ಡೂರು ಉಪಸ್ಥಿತರಿದ್ದರು
ಪ್ರಮುಖರಾದ ದೇವದಾಸ್ ಶೆಟ್ಟಿ ಕೊಡ್ಮಾಣ್, ಪ್ರಶಾಂತ್ ತುಂಬೆ, ಪದ್ಮನಾಭ ಶೆಟ್ಟಿ ಪುಂಚಮೆ,ಶಿವರಾಜ್ ಸುಜೀರ್
ಮೋಹನ್ ಬೆಂಜನಪದವು, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸುಕೇಶ್ ಶೆಟ್ಟಿ ತೇವು ಕಾರ್ಯಕ್ರಮ ನಿರೂಪಿಸಿದರು.


Advertisement







