
ಬಂಟ್ವಾಳ: ಮೆಕ್ಯಾನಿಕ್ ಗಳು ಜೀವನದ ಪಯಣವನ್ನು ರೂಪಿಸಬಲ್ಲರು. ವಾಹನಗಳು ನಿಂತರೆ ಚಲನೆಯೇ ನಿಲ್ಲುತ್ತದೆ, ಮೆಕ್ಯಾನಿಕ್ಗಳ ಸೇವೆಯಿಂದ ಆ ಚಲನೆ ಮುನ್ನಡೆಯುತ್ತದೆ ಎಂದು ಪ್ರಗತಿಪರ ಕೃಷಿಕ ಪ್ರಕಾಶ್ ಕಾರಂತ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ರಜತ ಸಂಭ್ರಮ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಮಾತನಾಡಿ ಗ್ಯಾರೇಜು ಮಾಲಕರು ತಾವು ಮಾಲಕರಾಗಿದ್ದರೂ ಕೆಲಸವನ್ನು ಅರಿತುಕೊಂಡ ಕೆಲಸಗಾರರು. ವೃತ್ತಿ ನಿಷ್ಠೆಯೊಂದಿಗೆ ಸಂಘದ ಸೇವಾಕಾರ್ಯದಲ್ಲೂ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದರು.
ಬೂಡ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಮಾತನಾಡಿ ಗ್ಯಾರೇಜು ಮಾಲಕರ ಮಾನವೀಯ ಸೇವೆ ವಿಶಿಷ್ಠವಾದುದು. ಗ್ಯಾರೇಜು ಮಾಲಕರ ಸಂಘದಲ್ಲಿ ಎಲ್ಲಾ ಸಮುದಾಯದ ವ್ಯಕ್ತಿಗಳಿದ್ದು ಈ ಸಂಘದಲ್ಲಿ ಸಮುದಾಯ ಭವನ ನಿರ್ಮಿಸಿದರೇ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.


ಕಾಲಿನಲ್ಲಿ ಚಿತ್ರ ಬರೆದು ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಬರೆದ ಕೌಶಿಕ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ಸಂಘದ ಚಟುವಟಿಕೆಗೆ ಸಹಕಾರ ನೀಡಿದ ರೋನಿ ಫೆರ್ನಾಂಡೀಸ್ ದಂಪತಿಯನ್ನು ಗೌರವಿಸಲಾಯಿತು. ಖ್ಯಾತ ಬೈಕ್ ರೈಡರ್ ಗಳಾದ ಮೂಸ ಶರೀಫ್ ಹಾಗೂ ಅಶ್ವಿನ್ ನಾಯಕ್ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜ್ಯೋತಿಷಿ ಅನಿಲ್ ಪಂಡಿತ್, ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಅಧ್ಯಕ್ಷ ಬಿ.ಮೋಹನ್ , ದ.ಕ. ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಕೆಎಸ್ ಟಎ ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್, ಸಂಘದ ನೂತನ ಅಧ್ಯಕ್ಷ ಗಣೇಶ್ ಸುವರ್ಣ, ನಿರ್ಗಮನ ಅಧ್ಯಕ್ಷ, ಸುಧೀರ್ ಪೂಜಾರಿ, ಕಾರ್ಯದರ್ಶಿ ಉಮೇಶ್ ಶೆಟ್ಟಿ, ಕೋಶಾಧಿಕಾರಿ ರಮೇಶ್ ಭಂಡಾರಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಪ್ತಾಸ್ತವಿಕದೊಂದಿಗೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಗದೀಶ್ ರೈ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು


—
Advertisement







