
ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 18ನೇ ಶಿರ್ತಾಡಿ ಶಾಖೆಯು ಭಾನುವಾರ ಶಿರ್ತಾಡಿ ಮಕ್ಕಿ ಹೈಸ್ಕೂಲ್ ರಸ್ತೆಯ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಶಾಖೆಯನ್ನು ಉದ್ಘಾಟಿಸಿದರು. ಶಿರ್ತಾಡಿ ಶಿಮುಂಜೆ ಗುತ್ತು ಸಂಪತ್ ಸಾಮ್ರಾಜ್ಯ್ ಭದ್ರತಾ ಕೋಶ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ದೀಪ ಪ್ರಜ್ವಲಿಸಿ ಮಾತನಾಡಿ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಎಲ್ಲಾ, ಜಾತಿ, ವರ್ಗದ ಜನರ ಸಹಕಾರದಿಂದ ಕರಾವಳಿ ಭಾಗದಲ್ಲಿ ಅತ್ಯಂತ ಬಲಿಷ್ಠವಾದ ಸಹಕಾರಿ ಸಂಘವಾಗಿ ಮೂಡಿ ಬಂದಿದೆ ಎಂದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸಾಮಾಜಿಕ ಹಕ್ಕನ್ನು ಕೊಡುವ ಹೊಣೆಗಾರಿಕೆ ಎಲ್ಲರಿಗಿದ್ದು ಸಂಜೀವ ಪೂಜಾರಿಯವರು ತನ್ನ ಸಹಕಾರಿ ಸಂಘದ ಎಲ್ಲಾ ಶಾಖೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಅರ್ಥ ನೀಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘವನ್ನು ಸ್ಥಾಪಿಸಿ 18 ಶಾಖೆಗಳನ್ನು ತೆರೆದಿರುವ ಸಂಜೀವ ಪೂಜಾರಿಯವರು ನಿಜವಾದ ಸಹಕಾರಿ ರತ್ನ ಎಂದರು. ಮಹಿಳೆಯರಿಗೆ ಮೀಸಲಾತಿ ನೀಡುಬೇಕು ಎನ್ನುವ ಚರ್ಚೆ ಪ್ರಸ್ತುತ ನಡೆಯುತ್ತಿದ್ದು ಮಹಿಳೆಯರಿಗೆ ಉದ್ಯೋಗವಕಾಶವನ್ನು ನೀಡುವ ಮೂಲಕ ಸಂಜೀವ ಪೂಜಾರಿ ಈ ಕಾರ್ಯವನ್ನು ಈ ಹಿಂದೆಯೇ ತನ್ನ ಸಹಕಾರಿ ಸಂಘದಲ್ಲಿ ಮಾಡಿದ್ದಾರೆ ಎಂದರು.


ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ ಬಿಲ್ಲವ ಸಮಾಜದ ಕುಲಕಸುಬಾಗಿದ್ದ ಮೂರ್ತೆದಾರಿಕೆಯ ಹೆಸರನ್ನು ಉಳಿಸುವ ಉದ್ದೇಶದಿಂದ ಈ ಸಹಕಾರಿ ಸಂಘವನ್ನು ಪ್ರಾರಂಭ ಮಾಡಲಾಯಿತು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸಂಘದ ಮೇಲೆ ಜನರು ವಿಶ್ವಾಸ ಇಟ್ಟುಕೊಂಡಿರುವುದರಿಂದ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಪ್ರಸ್ತುತ 42 ಮಂದಿ ಮಹಿಳೆಯರು ಉದ್ಯೋಗ ಮಾಡುತ್ತಿದ್ದು ಶೇ.98 ವಸೂಲಾತಿಯೂ ಆಗಿದೆ.
ಸಜೀಪಮೂಡದಲ್ಲಿ 5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡದ ಕೆಲಸ ಆಗುತ್ತಿದ್ದು ಮುಂದಿನ ಮಾರ್ಚಿನೊಳಗಾಗಿ ಉದ್ಘಾಟನೆಗೊಳಿಸುವ ಇಚ್ಚೆ ಹೊಂದಿದ್ದೇವೆ ಎಂದರು.
ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ ಕಾಶಿಪಟ್ಣ ಠೇವಣಿ ಪತ್ರ ವಿತರಿಸಿದರು.
ನವಮೈತ್ರಿ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ವಿ. ಶೆಟ್ಟಿ, ಕಟ್ಟಡ ಮಾಲಕ
ರತ್ನಾಕರ ಬುಣ್ಣನ್, ಮಹಮ್ಮದ್ ದೋಣಿಬಾಗಿಲು, ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಮಾಂಟ್ರಾಡಿ,
ಬೂಡ ಅಧ್ಯಕ್ಷ ಬೇಬಿ ಕುಂದರ್, ಸಂಘದ ಉಪಾಧ್ಯಕ್ಷ
ವಿಠಲ ಬೆಳ್ಚಾಡ, ಹಿರಿಯ ನಿರ್ದೇಶಕ ಸುಂದರ ಪೂಜಾರಿ ಬೀಡಿನ ಪಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ಕೆ.ಸುಜಾತ ಎಂ., ವಾಣಿವಸಂತ, ಆಶಿಶ್ ಪೂಜಾರಿ, ಚಿದಾನಂದ ಎಂ. ಕಡೇಶ್ವಾಲ್ಯ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ, ಶಾಖಾ ವ್ಯವಸ್ಥಾಪಕಿ ಅಕ್ಷಿತಾ ಕೆ. ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ನಿರ್ದೇಶಕರಾದ ಪ್ರಸಾದ್ ಎಂ. ಕೆ. ಸ್ವಾಗತಿಸಿದರು, ಜಯಶಂಕರ್ ಕಾನ್ಸಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
Advertisement







