
ಬಂಟ್ವಾಳ: ಇಲ್ಲಿನ ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ವಿಭಾಗ ವತಿಯಿಂದ ಎ.ಜೆ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಮಂಗಳೂರು ಹಾಗೂ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಎಂಐಓ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು, ಎನ್ ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಹಾಗೂ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಬಂಟರ ಸಭಾಭವನದಲ್ಲಿ ಭಾನುವಾರ ನಡೆಯಿತು.

ಎಂಐಓ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞೆ ಡಾ. ದಿವ್ಯಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿದರು. ಎ.ಜೆ.ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಾಮನ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರೋಗ್ಯ ಶಿಬಿರ ಆಯೋಜಿಸುವುದರಿಂದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಯೆ ಜನರ ಬಳಿ ಬಂದಂತಾಗುತ್ತದೆ. ಜನರು ರೋಗ ಬರುವ ಮೊದಲೆ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳುವುದು ಉತ್ತಮ ಎಂದರು. ರಕ್ತದಾನ ಒಳ್ಳೆಯ ಕೆಲಸ. ಇದರ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಎಂಐಓ ಆಸ್ಪತ್ರೆಯ ನಿರ್ದೇಶಕ, ಹಿರಿಯ ಕ್ಯಾನ್ಸರ್ ತಜ್ಞ ಡಾ.ಸುರೇಶ್ ರಾವ್ ಮಾತನಾಡಿ ಆರೋಗ್ಯ ತಪಾಸಣೆ ಹಾಗೂ ಅದರ ಬಗ್ಗೆ ಅರಿವು ಮೂಡಿಸುವುದು ಶ್ರೇಷ ಕೆಲಸ. ಕ್ಯಾನ್ಸರ್ ರೋಗ ಇಂದು ಭಾರತ ದೇಶದಲ್ಲಿ ವ್ಯಾಪಕವಾಗಿದೆ. ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕಾಗಿದೆ ಎಂದರು.
ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವರ ರೂಪದಲ್ಲಿರುವ ವೈದ್ಯರನ್ನು ಗೌರವಿಸುವುದು ನಮ್ಮ ಧರ್ಮ.
ರೋಗವು ಮನುಷ್ಯನಿಗೆ ಬರುವುದು ಸ್ವಾಭಾವಿಕ. ಕಾಲಕಾಲಕ್ಕೆ ಆರೋಗ್ಯ ತಪಾಣೆ ಮಾಡಿಕೊಳ್ಳುವ ಮೂಲಕ ರೋಗದಿಂದ ದೂರ ಇರಬಹುದು ಎಂದರು.

ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ. ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಗಿ ಆರೋಗ್ಯ ಶಿಬಿರದ ಮಹತ್ವವನ್ನು ತಿಳಿಸಿದರು. ಡಾ. ದಿವ್ಯಜ್ಯೋತಿ ಕ್ಯಾನ್ಸರ್ ರೋಗದ ಬಗ್ಗೆ ಆರೋಗ್ಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಡಾ. ಸಂಸ್ಕೃತಿ ಶೆಟ್ಟಿ, ಡಾ. ಅಲಕಾ ಭಟ್ ಉಪಾಧ್ಯಕ್ಷೆ ಜ್ಯೋತಿ ಎನ್. ಹೆಗ್ಡೆ, ಕೋಶಾಧಿಕಾರಿ ರೂಪಾ. ಎಲ್. ಶೆಟ್ಟಿ, ಸುಜಾತ ಆರ್ ಭಂಡಾರಿ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಉಪಸ್ಥಿತರಿದ್ದರು
ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ. ರೈ ಸ್ವಾಗತಿಸಿದರು,
ಕಾರ್ಯದರ್ಶಿ ಮಂದಾರತಿ ಶೆಟ್ಟಿ ವಂದಿಸಿದರು.
ಸುಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹೃದ್ರೋಗ ತಪಾಸಣೆ , ಕ್ಯಾನ್ಸರ್ ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಸ್ತ್ರೀರೋಗ ತಪಾಸಣೆ, ದಂತ ತಪಾಸಣೆ, ಕಣ್ಣಿನ ಪರೀಕ್ಷೆ, ಇ.ಸಿ.ಜಿ, ಬಿ.ಪಿ ಶುಗರ್ ಹಾಗೂ ಸಾಮಾನ್ಯ ತಪಾಸಣೆ ಉಚಿತ ಕನ್ನಡಕ ವಿತರಣೆ ರಕ್ತದಾನ ಶಿಬಿರ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶಿಬಿರ ಪ್ರಯೋಜನ ಪಡೆದುಕೊಂಡರು.
Advertisement







