
ಬಂಟ್ವಾಳ: ಬಿ.ಸಿ.ರೋಡಿನ ಗೂಡಿನ ಬಳಿಯ ಬಳಕ ಎಂಬಲ್ಲಿ ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಊರಿಗೆ ಸರಿಯಾದ ದಾರಿ ವ್ಯವಸ್ಥೆ ಇಲ್ಲದ ಕಾರಣ ಅಗ್ನಿಶಾಮಕ ವಾಹನ ಆಗಮಿಸಿದರೂ ಅವಘಡ ಸಂಭವಿಸಿದ ಮನೆಗೆ ಸಕಾಲದಲ್ಲಿ ತಲುಪಲು ಸಾಧ್ಯವಾಗದೆ ಅಪಾರ ವಸ್ತುಗಳು ಬೆಂಕಿಗೆ ಆಹುತಿಯಾಗಿ ಭಾಗಶಃ ಮನೆಯೇ ಸುಟ್ಟು ಕರಕಲಾಗಿದೆ.



ಇಲ್ಲಿನ ಚಾರ್ಲಿ ಡಿಸೋಜಾ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಬೆಳಿಗ್ಗೆ 9.30 ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭ ಮನೆಯಲ್ಲಿ ಮನೆಯ ಯಜಮಾನ ಅನಾರೋಗ್ಯ ಪೀಡಿತ ವಿಜಯ್ ಹಾಗೂ ಅವರ ಮಗಳು ಮಾತ್ರ ಇದ್ದರು. ವಿಜಯ್ ಅವರ ಮಗಳು ಬಟ್ಟೆಯಂಗಡಿ ನಡೆಸುತ್ತಿದ್ದು ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಬರೆಗಳು ಇದ್ದವು. ಬೆಂಕಿ ಅವಘಡದ ವೇಳೆ ಅವೆಲ್ಲವೂ ಬೆಂಕಿಗೆ ಆಹುತಿಯಾಗಿ ಸುಟ್ಟುಹೋಗಿದ್ದು ಮನೆಯಲ್ಲಿ ದ್ದ ಗೃಹಪಯೋಗಿ ವಸ್ತುಗಳು ಬೂದಿಯಾಗಿವೆ. ಮನೆಯ ಯಜಮಾನ ವಿಜಯ್ ಅವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದ ಮನೆಗೆ ಸರಿಯಾದ ದಾರಿ ವ್ಯವಸ್ಥೆ ಇಲ್ಲದೆ ಅಗ್ನಿಶಾಮಕ ದಳದ ವಾಹನ ಅರ್ಧದಲ್ಲಿಯೇ ಸಿಲುಕಿಕೊಂಡು ತಲುಪಲು ಅಸಾಧ್ಯವಾಯಿತು. ಬಳಿಕ ಸಿಬ್ಬಂದಿಗಳು ಹಾಗೂ ಸ್ಥಳೀಯರು ಲಭ್ಯವಿದ್ದ ನೀರಿನ ವ್ಯವಸ್ಥೆಯಲ್ಲಿ ಬೆಂಕಿ ನಂದಿಸಿದರು.ಸ್ಥಳಕ್ಕೆ ಗ್ರಾಮಾಡಾಳಿತಾಧಿಕಾರಿ ಯಶ್ವಿತಾ
ಸಿಬ್ಬಂದಿ ಸದಾಶಿವ ಕೈಕಂಬ ಭೇಟಿ ನೀಡಿದರು.

Advertisement







