
ಬಂಟ್ವಾಳ: ವಿದ್ಯಾಸಂಸ್ಥೆಗಳು ದೇವ ಮಂದಿರವಿದ್ದಂತೆ. ಮನಸ್ಸು ಶುದ್ದವಾಗಿದ್ದಾಗ ದಿನದ ಕೆಲಸಕಾರ್ಯಗಳು ನಮಗೆ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು, ತಾಳ್ಮೆ ಇದ್ದಾಗ ಸಾಧಕರಾಗಲು ಸಾಧ್ಯವಿದೆ ಎಂದು ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ ಮಠ ಹೇಳಿದರು.


ಮಂಗಳವಾರ ಕಾಲೇಜಿನಲ್ಲಿ ನಡೆದ ವಾರ್ಷಿಕ ಪ್ರತಿಭಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುರಸಭೆ ಸದಸ್ಯೆ ಝೀನತ್ ಫಿರೋಜ್, ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯಶೋಧಾ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿದರು, ಉಪಾನ್ಯಾಸಕ ಇರ್ಷಾದ್ ವಂದಿಸಿದರು. ಉಪನ್ಯಾಸಕಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.
Advertisement







