
ಬಂಟ್ವಾಳ: ಇಲ್ಲಿನ ಶ್ರೀ ಇರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಲೆ ಸೇವೆ ಒಂದು ತಿಂಗಳ ಪರ್ಯಂತ ನಡೆಯಿತು.
ಭಾನುವಾರ ದೇವಳದಲ್ಲಿ ಹಿರಿಯ ಅರ್ಥಧಾರಿ ಸಾಹಿತಿ ಪ್ರೋ. ಎಂ.ಎಲ್. ಸಾಮಗ, ಹವ್ಯಾಸಿ ಭಾಗವತ ಶ್ರೀಧರ ಪೂಜಾರಿ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ದೇವಳದ ಆಡಳಿತ ಮೋಕ್ತೇಸರ ಅಶೋಕ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುರಳೀಧರ ನೇರಂಕಿ ಸ್ವಾಗತಿಸಿದರು. ನಾಗೇಂದ್ರ ಪೈ ವರದಿ ವಾಚಿಸಿದರು. ದೇವದಾಸ ಅರ್ಕುಳ ಹಾಗೂ ವಾಮನ ಪಾಣೆಮಂಗಳೂರು ಸನ್ಮಾನ ಪತ್ರ ವಾಚಿಸಿದರು. ಪಿ. ವಸಂತ ಪ್ರಭು ವಂದಿಸಿದರು. ಸಂಕಪ್ಪ ಶೆಟ್ಟಿ ಸಂಚಯಗಿರಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸೀತಾ ಪರಿತ್ಯಾಗ ಮತ್ತು ಗಂಗಾ ಸಾರಥ್ಯ ತಾಳಮದ್ದಲೆ ನಡೆಯಿತು.


Advertisement







