ಮಂಗಳೂರು: ಕರ್ನಾಟಕ ಅಮೆಚೂರು ಜೂಡೋ ಅಸೋಸಿಯೇಷನ್ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಅಮೆಚೂರು ಜೂಡೋ ಅಸೋಷಿಯೇಷನ್ ಸಹಯೋಗದಲ್ಲಿ ಬಾಲಕ, ಬಾಲಕಿಯರಿಗಾಗಿ ನಡೆದ ಕರ್ನಾಟಕ ರಾಜ್ಯಮಟ್ಟದ ಮುಕ್ತ ಜೂಡೋ ಪಂದ್ಯಾಟದ ಮಿನಿ ಕಿಡ್ಸ್ ವಿಭಾಗದಲ್ಲಿ ಮಂಗಳೂರಿನ ವಿಭಾ ಕಂಚಿನ ಪದಕ ಗೆದ್ದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೆಳಗಾವಿಯ ಗಾಂಧಿ ಭವನದಲ್ಲಿ ಜುಲೈ 25 ರಿಂದ 27ರವರೆಗೆ ಜೂಡೋ ಪಂದ್ಯಾಟ ನಡೆದಿದೆ.

ಈಕೆ ಎಸ್ಇಎಫ್ಎಲ್ಸಿ ವಿದ್ಯಾಸಂಸ್ಥೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದು ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ನಂದಾದೀಪಾ ಅಪಾರ್ಟ್ಮೆಂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.



Advertisement








