
ಬಂಟ್ವಾಳ: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು ಹಾಗೂ ರಕ್ಷಕ ಶಿಕ್ಷಕ ಸಂಘ ದ ಆಶ್ರಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಹಳೇ ವಿದ್ಯಾರ್ಥಿ ಗಳಿಗೆ, ಪೋಷಕರಿಗೆ ಸಿಬ್ಬಂದಿ ವರ್ಗದವರಿಗೆ ಕೆಸರ್ಡ್ ಒಂಜಿ ದಿನ ಕೆಸರು ಗದ್ದೆ ಕ್ರೀಡಾಕೂಟ ಸ್ಪರ್ಶ ಕಲಾ ಮಂದಿರದ ಗದ್ದೆಯಲ್ಲಿ ನಡೆಯಿತು.
ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯ ಸೇವಾ ಸಮಿತಿ ಅಧ್ಯಕ್ಷ ರಾದ ವಿಶ್ವನಾಥ್ ಬಿ. ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾದ ಸಂಜೀವ ಪೂಜಾರಿ ಗುರುಕೃಪ ಇವರು ತೆಂಗಿನ ಹೂ ಅರಳಿಸಿ ಕ್ರೀಡಾ ಕೂಟ ಕ್ಕೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಸುನೀಲ್ ಆಚಾರ್ಯ ಅಪೂರ್ವ ಜ್ಯುವೆಲ್ಲರ್ಸ್ ಬಿ ಸಿ ರೋಡ್ ಗದ್ದೆಗೆ ಹಾಲು ಹಾಕುವ ಮುಖೇನ ಕ್ರೀಡಾ ಕೂಟಕ್ಕೆ ಯಶಸ್ಸನ್ನು ಕೋರಿದರು.ಗೌರವ ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಮ್ಯಾಥ್ಯೂ ಫ್ರಾನ್ಸಿಸ್ ಡಿ ಕುನ್ಹಾ , ಸವಿತಾ ಅರುಣ್ ಪ್ರಕಾಶ್ ಮೊಡoಕಾಪು, ಅಭಿಲಾಶ್ ಭಟ್ , ಜ್ಞಾನೇಶ್ ರಾವ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ಯವರು ಕ್ರೀಡಾಕೂಟ ಕ್ಕೆ ಶುಭ ಹಾರೈಸಿದರು.ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುಂದರ್ , ಕೋಶಾಧ್ಯಕ್ಷ ಜಯಶ್ರೀ, ಶಾಲಾ ಆಡಳಿತ ಮಂಡಳಿಯ ಸದಸ್ಯ ರಾಜೇಶ್ ಅಮಿನ್ ಮತ್ತು ಅಶ್ರಿತ್ ಅಮೀನ್ ಹಾಗೂ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಐತಪ್ಪ ಪೂಜಾರಿ ಸ್ವಾಗತಿಸಿ ಸದಸ್ಯೆ ಆರತಿ ಅಮೀನ್ ವಂದಿಸಿದರು. ಪೋಷಕರಾದ ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂಸ್ಥೆಯ ಶಿಕ್ಷಕಿಯರು ಹಾಗೂ ಶಿಕ್ಷಕರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಗಳಿಂದ ನೃತ್ಯ ಪ್ರದರ್ಶನ ದೊಂದಿಗೆ ಕ್ರೀಡಾಕೂಟ ಕ್ಕೆ ಚಾಲನೆ ನೀಡಲಾಯಿತು.
Advertisement







