
ಬಂಟ್ವಾಳ: ಮಾರ್ನಬೈಲ್ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಹಾಗೂ ಜಮೀನು ಖರೀದಿ ಸಂಕಲ್ಪಕ್ಕಾಗಿ 18 ಗುರುವಾರಗಳಪರ್ಯಂತ ನಡೆಯುವ ಪಂಚಾರತಿ ಸೇವೆಯ 10ನೇ ಗುರುವಾರದ ಪಂಚಾರತಿ ಸೇವೆ ನಡೆಯಿತು.
ಪ್ರಗತಿಪರ ಕೃಷಿಕ ಕುಲ್ಯಾರು ಜಯರಾಮ ಶೆಟ್ಟಿ, ಆನಂದ ಕುಲಾಲ್ ಅಮ್ಟೂರು, ಶಿವಪ್ರಸಾದ್ ಕೊಟ್ಟಾರಿ, ಉದ್ಯಮಿ ಮೋಹನ್ಕುಲಾಲ್ ಅಮ್ಟೂರು, ಕಿಶೋರ್ ಅವರು ಶ್ರೀ ದೇವರಿಗೆ ಪಂಚಾರತಿ ಬೆಳಗಿದರು.


ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಅಶೋಕ್ ಗಟ್ಟಿ ನಂದಾವರ, ಯೋಗೀಶ್ ಗಟ್ಟಿ, ಅಶ್ವಿನ್ ಕುಮಾರ್, ನಿತಿನ್ ಕುಮಾರ್, ಕೀರ್ತನ್, ಜಯನಂದ ಪಾಡಿ, ಗೋಪಿನಾಥ ನಾಯ್ಕ್, ಉಮೇಶ್ಕೋಮಾಲಿ, ಕೃಷ್ಣಪ್ಪ, ಗಣೇಶ್ ದೇವಾಡಿಗ, ರಾಜೀವ ಕೊಟ್ಟಾರಿ ಕಲ್ಲಡ್ಕ, ಸುರೇಶ್, ಶಕುಂತಳಾ ಗಟ್ಟಿ, ಗೋಪಾಲಕೃಷ್ಣ, ಪ್ರಮೀಳಾಗಣೇಶ್, ಗಣೇಶ್ ಗುಡ್ಡೆಯಂಗಡಿ, ವೆಂಕಟೇಶ್ ಮಾರ್ನಬೈಲು, ಜಯಶ್ರೀ ಅಶೋಕ್ ಗಟ್ಟಿ, ಅವಿನಾಶ್ ಗಟ್ಟಿ ಮಾರ್ನಬೈಲು,
ಚಿತ್ರಾಕ್ಷ ಮರ್ತಾಜೆ, ವಸಂತ ಪೂಜಾರಿ ನಾಗರಲಚ್ಚಿಲು, ನಾಗೇಶ್ ಕಾಪಿಕಾಡ್, ಗಣೇಶ್ ಬೊಂಡಾಲ, ಸುಧಿರ್ ನಾಯಕ್ಮೊದಲಾದವರು ಉಪಸ್ಥಿತರಿದರು. ಕೇಶವ ಮಾಸ್ಟರ್ ಮಾರ್ನಬೈಲು ಕಾರ್ಯಕ್ರಮ ನಿರೂಪಿಸಿದರು.
Advertisement







