ಕುಪ್ಪೆಪದವು: ಕೆನರ ಬ್ಯಾಂಕ್ ನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಂಘ ಹಸಿರು ಸೇನೆಯ ಸಹಯೋಗದೊಂದಿಗೆಕಿಲೆಂಜಾರು, ಕುಳವೂರು, ಮುತ್ತೂರು, ಮೊಗರು, ಬಡಗ ಉಳಿಪ್ಪಾಡಿ,ತೆಂಕ ಎಡಪದವು ಗ್ರಾಮದ ವ್ಯಾಪ್ತಿಯ ರೈತ ಸಂಪರ್ಕಸಭೆಯು ಮೊಗರು ಕುಕ್ಕಟ್ಟೆಯಲ್ಲಿರುವ ಸಭಾಂಗಣದಲ್ಲಿ ಶನಿವಾರ ನಡೆದಿದ್ದು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ, ಸರಕಾರದವಿಮಾ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಕೆನರಾ ಬ್ಯಾಂಕಿನ ರೀಜನಲ್ ಆಫೀಸರ್ ರಮೇಶ್ ನಾಯಕ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಗ್ರಾಹಕರು ಹಾಗೂ ಸಿಬ್ಬಂದಿಗಳ ಮಧ್ಯೆ ಭಾಷೆಯ ಸಮಸ್ಯೆಗಳಿರುವ ಬಗ್ಗೆ ಚರ್ಚೆಯಾಗುತ್ತಿದೆ. ನಮ್ಮ ಮನೋಭಾವನೆಉತ್ತಮವಾಗಿದ್ದಾಗ ಭಾಷೆ ವ್ಯವಹಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಸರಕಾರದಸವಲತ್ತುಗಳನ್ನು ಪಡೆಯಬೇಕು ಎಂದ ಅವರು ನಾವು ಹುಟ್ಟಿದ ಬಳಿಕ ಏನಾದರೂ ಸಾಧನೆ ಮಾಡಬೇಕು, ನಾವು ಮಾಡುವಒಳ್ಳೆಯ ಕೆಲಸ ಶಾಶ್ವತವಾಗಿವ ಉಳಿಯುತ್ತದೆ ಎಂದರು. ಗ್ರಾಹಕರನ್ನು ವಂಚಿಸುವ ಜಾಲದ ಬಗ್ಗೆ ಎಚ್ಚರವಾಗಿರಬೇಕು ಎಂದರು.

ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಯಾನಂದ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿಮಾತನಾಡಿ ಇಂದು ರೈತರಿಗೆ ಬ್ಯಾಂಕ್ ಹತ್ತಿರವಾಗಿದೆ. ರೈತರು ಹಾಗೂ ಬ್ಯಾಂಕ್ ನಡುವೆ ಅವಿನಾಭಾವ ಸಂಬಂಧ ಇದೆ. ರೈತರುಬ್ಯಾಂಕ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರಿಯಾದ ದಾಖಲೆಗಳನ್ನು ನೀಡಿ ಸಾಲ ಪಡೆದು ತನ್ನ ಕೃಷಿಯನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕು ಎಂದರು.

ಕೆನರಾ ಬ್ಯಾಂಕ್ ಅಮೂಲ್ಯ ಹಣಕಾಸು ಸಾಕ್ಷರತಾ ಸಮಾಲೋಚಕ ಲತೀಶ್ ಬ್ಯಾಂಗಳಿಂದ ಸಿಗುವ ವಿವಿಧ ವಿಮಾ ಯೋಜನೆಗಳಬಗ್ಗೆ ಹಾಗೂ ಡಿಜಿಟಲ್ ವಂಚನೆಯ ಬಗ್ಗೆ ಮಾಹಿತಿ ನೀಡಿದರು.
ಕೆನರಾ ಬ್ಯಾಂಕಿನ ಬಡಗ ಉಳಿಪ್ಪಾಡಿ ಶಾಖಾಧಿಕಾರಿ ಮನೀಷ್, ಮೊಗರು ಬ್ಯಾಂಕಿನ ಶಾಖಾಧಿಕಾರಿ ಎನ್. ಶಿವಾನಂದ, ಗುರುಪುರಕೈಕಂಬ ಬ್ಯಾಂಖ್ ಶಾಖಾಧಿಕಾರಿ ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋರ ಶೆಟ್ಟಿ ನಡಿಕಂಬಳ ಗುತ್ತು ಪ್ರಾಸ್ತಾವಿಕ ವಾಗಿ ಮಾತನಾಡಿದರು, ರೈತಸಂಘದ ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಕುಳವೂರು ಗುತ್ತು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
Advertisement







