
ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಆರಾಧ್ಯ ದೇವರಾದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಜರಗಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಭಾನುವಾರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಗಣಪತಿ ಹೋಮ, ಅತಿಮಹಾರುದ್ರ ಪಾರಾಯಣ ವಿದ್ವಾನ್ ವೇದಮೂರ್ತಿ ಅನಂತ ಭಟ್ ಓಣಿ ಬೈಲು ನೇತೃತ್ವದಲ್ಲಿ ನಡೆಯಿತು.


ಶ್ರೀ ಕ್ಷೇತ್ರದಲ್ಲಿ ಈ ಪಾರಾಯಣ ಮೇ 4 ರಂದು ನಡೆಯುವ ಯಾಗದವರೆಗೂ ಪ್ರತಿನಿತ್ಯ ನಡೆಯಲಿದೆ. ವಾರಾಣಾಸಿ ಕಾಶಿಮಠದ ಶ್ರೀಮದ್ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾಯಾಗ ನಡೆಯಲಿದೆ. ಇಂದಿನ ಕಾರ್ಯಕ್ರಮದಲ್ಲಿ ಗೌರವಧ್ಯಕ್ಷ ರಘುನಾಥ ಸೋಮಯಾಜಿ, ಕಾರ್ಯಧ್ಯಕ್ಷ ಜಗನ್ನಾಥ ಚೌಟ ಭಾಗವಹಿಸಿದ್ದರು.
Advertisement







