
ಬಂಟ್ವಾಳ: ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಎ.4ರಿಂದ ಎ.9ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ತಿಳಿಸಿದರು.
ಮಂಗಳವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಎ.3ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. ಎ. 4ರಂದು ಬೆಳಿಗ್ಗೆ ಉಗ್ರಾಣ ಪೂಜೆ, ಸೇವಾ ಕಚೇರಿ ಉದ್ಘಾಟನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸನ್ನಿಧಿಗೆ ತಂತ್ರಿಗಳ ಆಗಮನವಾಗಲಿದ್ದು ರಾತ್ರಿ 7.30ಕ್ಕೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಎ.5ರಂದು ವಿವಿಧ ಪೂಜಾದಿ ಕಾರ್ಯಕ್ರಮಗಳು, ಎ.6ರಂದು ಸಂಜೆ 6 ಗಂಟೆಗೆ ಶ್ರೀ ಚಕ್ರಪೂಜೆ ನಡೆಯಲಿದೆ. ಎ.8ರಂದು ಸಂಜೆ 7.15ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ, ಎ.9ರಂದು ಬೆಳಿಗ್ಗೆ 8.29ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ರಕ್ತೇಶ್ವರೀ ದೇವಿ ಬಿಂ ಪುನರ್ ಪ್ರತಿಷ್ಠೆ, ಜೀವ ಕಲಶಾಭಿಷೇಕ ಹಾಗೂ ಪರಿಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಬ್ರಹ್ಮಕಲಶಾಭಿಷೇಕ, ನಾಗದೇವರ ಹಾಗೂ ಪರಿವಾರ ದೈವದ ಪ್ರತಿಷ್ಠೆ ನಡೆಯಲಿದೆ. ಉತ್ಸವದ ಪ್ರತಿದಿನ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಭಜನೆ, ಸಾರ್ವಜನಿಕ ಮಹಾಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಎ.3ರಂದು ಹೊರೆಕಾಣಿಕೆ:
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂಜೀವ ಪೂಜಾರಿ ಹಾಗೂ ಉಪಾಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಮಾತನಾಡಿ ಎ.3ರಂದು ಗುರುವಾರ ಮಧಾಹ್ನ 2 ಗಂಟೆಗೆ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ಬಿ.ಸಿ.ರೋಡು ಕೈಕಂಬ ಪೊಳಲಿ ದ್ವಾರದ ಬಳಿಯಲ್ಲಿ ಸಮಾವೇಶಗೊಂಡು ಕ್ಷೇತ್ರಕ್ಕೆ ಆಗಮಿಸಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ, ಭಕ್ತಾದಿಗಳು ಹಸಿರುವಾಣಿಯನ್ನು ಸಲ್ಲಿಸುವುದರೊಂದಿಗೆ ಹೊರಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿ ಮಾಡಿದರು. ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳಿಗೆ ಬರುವ ಭಕ್ತರಿಗೆ ವಾಹನಗಳನ್ನು ನಿಲುಗಡೆಗೊಳಿಸಲು ಶ್ರೀ ಅನ್ನಪೂರ್ಣೆಶ್ವರೀ ದೇವಸ್ಥಾನ, ಶ್ರೀ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಬಳಿಯ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಗ್ರಾಣ ಹಾಗೂ ಭೋಜನಕ್ಕಾಗಿ ದೇವಸ್ಥಾನದ ಎಡಭಾಗದಲ್ಲಿ ವಿಶಾಲವಾದ 2 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದರು.
ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ವಿವಿಧ ಸಮಿತಿಗಳ ಪ್ರಮುಖರಾದ ಸತೀಶ ಭಂಡಾರಿಕುಳತ್ತಬೆಟ್ಟು, , ಅಶ್ವನಿ ಕುಮಾರ್ ರೈ, ಐತಪ್ಪ ಪೂಜಾರಿ, ಕೆ. ನಾರಾಯಣ ಹೆಗ್ಡೆ, ಬಿ.ಮೋಹನ್, ರಾಜೇಶ್ ಎಲ್. ನಾಯಕ್, ಸತೀಶ್ ಶೆಟ್ಟಿ ಮೊಡಂಕಾಪು, ಸತೀಶ್ ಕುಮಾರ್
ರಮೇಶ್ ಸಾಲ್ಯಾನ್, ಪುಷ್ಪರಾಜ ಶೆಟ್ಟಿ, ಗೋಪಾಲ ಸುವರ್ಣ, ವಸಂತರಾವ್, ಲೋಕೇಶ್ ಸುವರ್ಣ ಅಲೆತ್ತೂರು ಉಪಸ್ಥಿತರಿದ್ದರು.
Advertisement







