
ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಲ್ಲಿರುವ ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಎ.1ರಿಂದ 3 ರವರೆಗೆ ಕಾಲಾವಧಿ ನೇಮೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಸೋಮವಾರ ದೈವ ಕ್ಷೇತ್ರದಲ್ಲಿ ಕೋಳಿಗುಂಟ ಸಾಂಪ್ರದಾಯಿಕವಾಗಿ ನೆರವೇರಿತು.
ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಕೋಳಿಗುಂಟ ವಿಧಿವಿಧಾನಗಳನ್ನು ನೆರವೇರಿಸಿದರು. ಪೊಣ್ಣಂಗಿಲ ಗುತ್ತುವಿನ ವಿಶ್ವನಾಥ ಪೂಜಾರಿ, ಬಾಳಿಗ ಮನೆತನದ ಸುಧೀರ್ ಬಾಳಿಗ, ಗಾಣದಪಡ್ಪು ಮನೆತನದ ಲೋಕೇಶ್ ಬಂಗೇರ, ಸಂಜೀವ ಪೂಜಾರಿ ಪೆಲತ್ತಿಮಾರ್, ಬಡಕೊಟ್ಟು ಮನೆತನದ ಲೋಕನಾಥ ಪೂಜಾರಿ, ಪ್ರಮುಖರಾದ ಬಾಬು ಶೆಟ್ಟಿ ತುಂಬೆ, ಶ್ರೀಧರ ಪೂಜಾರಿ, ದೇವದಾಸ್ ಅಮೀನ್, ಜಗನ್ನಾಥ ಬಂಟ್ವಾಳ, ಜಯಸುವರ್ಣ, ಶಿವಪ್ರಸಾದ್ ಬಂಟ್ವಾಳ, ಮತ್ತಿತರರು ಭಾಗವಹಿಸಿದ್ದರು.

ಎ.೧ ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ,ಅನ್ನಸಂತರ್ಪಣೆ, ರಾತ್ರಿ ೯ ಗಂಟೆಗೆ ಭಂಡಾರ ಅಗಮಿಸಿ ,ಧ್ವಜಾರೋಹಣ ನಡೆದು ಶ್ರೀ ಅರಸು ದೈವದ ನೇಮೋತ್ಸವ ಎ.೨ ರಂದು ರಾತ್ರಿ ೯ ಗಂಟೆಗೆ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ, ಎ. ೩ ರಂದು ರಾತ್ರಿ ೧೦ ಗಂಟೆಗೆ ಶ್ರೀ ವೈದ್ಯನಾಥ ದೈವದ ನೇಮೋತ್ಸವ, ಕಂಚಿಲ ಸೇವೆ ಹಾಗೂ ಶ್ರೀ ವೈದ್ಯನಾಥ ದೈವದ ಪೇಟೆ ಸವಾರಿ , ಬಂಡಿ ಉತ್ಸವ ನಡೆಯಲಿದೆ.
Advertisement







