ಬಂಟ್ವಾಳ: ವಾಹನ ಮನೆಯಲ್ಲಿದ್ದರೂ ಟೋಲ್ಗೇಟ್ಗೆಂದು ಖಾತೆಯಿಂದ ಹಣ ಕಡಿತವಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗ್ರಾಹಕರು ಈ ಹಗಲು ದರೋಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ದಿನಗಳ ಹಿಂದೆಯಷ್ಟೇ ಬಂಟ್ವಾಳದ ಉದ್ಯಮಿಯೊಬ್ಬರ ಕಾರು ಮನೆಯಲ್ಲಿಯೇ ಇದ್ದರೂ ಕೂಡ ಬ್ರಹ್ಮರಕೂಟ್ಲು ಟೋಲ್ಗೇಟ್ಗಾಗಿ ತನ್ನ ಖಾತೆಯಿಂದ ಹಣ ಕಡಿತಗೊಂಡಿರುವ ಬಗ್ಗೆ ದೂರಿಕೊಂಡಿದ್ದರು. ಕಳೆದ ಗುರುವಾರ ಬಂಟ್ವಾಳದ ವೈದ್ಯರೊಬ್ಬರ ಖಾತೆಯಿಂದಲೂ ಟೋಲ್ ಸುಂಕವೆಂದು ಹಣ ಕಡಿತಗೊಂಡಿದೆ. ಡಾ. ಬಾಲಕೃಷ್ಣ ಅಗ್ರಬೈಲು ಅವರ ಕಾರು ಮನೆಯಲ್ಲಿಯೇ ಇದ್ದರೂ ಕೂಡ ರಾತ್ರಿ 7.30ರ ವೇಳೆಗೆ ಹಣ ಕಡಿತಗೊಂಡು ಅದರ ಮೆಸೆಜ್ ಮೋಬೈಲ್ಗೆ ಬಂದಿದೆ. ಈ ಹಗಲು ದರೋಡೆಗೆ ಪ್ರತಿದಿನ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಯಯನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.
Advertisement