ಬಂಟ್ವಾಳ:ಜೆಸಿಐ ಬಂಟ್ವಾಳ ದ 2023 ರ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಸಾಧಕ ವ್ಯಕ್ತಿ ಗಳ ಸನ್ಮಾನ ಕಾರ್ಯಕ್ರಮದಲ್ಲಿ ಹಸಿರು ದಳದ ಸಂಯೋಜಕ ನಾಗರಾಜ್ ಅಂಚನ್ ಬಜಾಲ್, ಎಸ್ ಕೆ ಡಿಪಿ ಬಂಟ್ವಾಳ ವಲಯಾಧ್ಯಕ್ಷ ಕಿಶೋರ್ ಬಿ.ಸಿ. ರೋಡ್, ಕನ್ನಡ ಮಾಧ್ಯಮದಲ್ಲಿ ಎಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಪಡೆದ ಪ್ರಥಮ್ ಹಾಗೂ ಬಾಲ ಪ್ರತಿಭೆ ಆದ್ಯ ಬಾಳೆಹಿತ್ಲು ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋ ಶಿಯೇಷನ್ ಅಧ್ಯಕ್ಷ ಕಿಶೋರ್ ಕುಮಾರ್, ವರ್ತಕರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸುಭಾಷ್ ಚಂದ್ರ ಜೈನ್, ನಿಕಟ ಪೂರ್ವಧ್ಯಕ್ಷ ರೋಷನ್ ರೈ, ಪೂರ್ವಧ್ಯಕ್ಷರಾದ ಲೋಕೇಶ್ ಸುವರ್ಣ, ಜೇಸಿ ಸಪ್ತಾಹದ ನಿರ್ದೇಶಕರಾದ ಸಂತೋಷ್ ಜೈನ್, ಕಾರ್ಯಕ್ರಮ ಸಂಯೋಜಕ ಸದಾನಂದ ಬಂಗೇರ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು. ಬಂಟ್ವಾಳ ಜೇಸಿ ಯ ಎಲ್ಲಾ ಪೂರ್ವಧ್ಯಕ್ಷರುಗಳು, ಜೇಸಿ ಸದಸ್ಯರುಗಳು, ಲೇಡಿ ಜೇಸಿ ಗಳು, ಜೂನಿಯರ್ ಜೇಸಿ ಗಳು ಭಾಗವಹಿಸಿದ್ದರು. ಬಳಿಕ ಸಾಂಸ್ಕತಿಕ ಕಾರ್ಯಕ್ರಮ ಕುಸಲ್ದ ಕುರ್ಲರಿ ಕಾಮಿಡಿ ಶೋ, ಸದಸ್ಯರಾದ ನಾಗೇಶ್ ತಂಡ ದಿಂದ ಸಂಗೀತ ರಸಸಂಜೆ, ವೀಕ್ಷಿತಾ ಶ್ರೀನಿವಾಸ್ ತಂಡದಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.