ಬಂಟ್ವಾಳ: ಸ್ಪರ್ಧೆ ಎನ್ನುವುದು ವಿದ್ಯಾರ್ಥಿ ಜೀವನದಿಂದಲೇ ಆರಂಭವಾದಾಗ ಭವಿಷ್ಯದ ಸ್ಪರ್ಧಾತ್ಮಕ ಜೀವನವನ್ನು ಎದುರಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲೂ ಸುಲಭವಾಗುತ್ತದೆ ಎಂದು ತುಂಬೆ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ಗಂಗಾಧರ ಆಳ್ವ ಹೇಳಿದರು.
Advertisement
ಅವರು ತುಂಬೆ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ಅಂತರ್ ತರಗತಿ ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ತುಂಬೆ ಪ.ಪೂ.ಕಾಲೇಜಿನ ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ.ಬಿ.,ಡಾ.ವಿಶ್ವನಾಥ ಪೂಜಾರಿ,ಕಾರ್ಯಕ್ರಮ ಸಂಯೋಜಕಿ ಅಖಿಲಾ, ಪ್ರೌಢಶಾಲಾ ವಿಭಾಗದ ಅಧ್ಯಾಪಕ ರಮೇಶ್ ಮೆಲ್ಕಾರ್,ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಣ ನಿರ್ದೇಶಕ ಸಾಯಿರಾಮ್ ನಾಯಕ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು,ಉಪನ್ಯಾಸಕಿ ನೀತಾಶ್ರೀ ನಿರೂಪಿಸಿದರು.
Advertisement