ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ(ರಿ.) ಪೊಸಳ್ಳಿ ಬಂಟ್ವಾಳ ಇದರ ವತಿಯಿಂದ ಪ್ರತೀ ವರ್ಷದಂತೆ ನಡೆಯುವ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಬಂಟ್ವಾಳ ತಾಲೂಕಿನ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿಭಾಗಗಳಲ್ಲಿ 2023ರಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಭಾವಚಿತ್ರ, ಅಂಕ ಪಟ್ಟಿಯ ಪ್ರತಿ, ಕಲಿಕಾ ಪ್ರಮಾಣ ಪತ್ರ ಮತ್ತು ಆಧಾರ್ ಪ್ರತಿಯೊಂದಿಗೆ ಸಂಘ ಕಚೇರಿಗೆ ಅರ್ಜಿ ಸಲ್ಲಿಸುವುದು. ಹಾಗೆಯೇ 2023 ರಲ್ಲಿ 10ನೇ ತರಗತಿಯಲ್ಲಿ 85% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಕುಲಾಲ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿ ಆಧಾರ್ ಪ್ರತಿ ˌಕಲಿಕಾ ಪ್ರಮಾಣ ಪತ್ರ ಮತ್ತು ಭಾವಚಿತ್ರ ದೊಂದಿಗೆ ಸ್ವ-ವಿವರ ಅರ್ಜಿಯನ್ನು ಅಧ್ಶಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ(ರಿ.), ಪೊಸಳ್ಳಿ, ಬಿ.ಸಿ. ರೋಡು ಬಂಟ್ವಾಳ ತಾಲೂಕು , ದ.ಕ. -574219 ಇಲ್ಲಿಗೆ ತಾ-05-09-2023 ರ ಒಳಗೆ ಕಳುಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.