ಬಂಟ್ವಾಳ: ಭಾನುವಾರ ನಡೆದ ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳ ಹಲವಾರು ಪುರಸ್ಕಾರಗಳನ್ನು ಬಾಚಿಕೊಂಡಿದೆ.
ಜೆಸಿಐ ನೇತ್ರಾವತಿ ಜೋಡುಮಾರ್ಗ ಆತಿಥ್ಯದಲ್ಲಿ ಬೆಂಜನಪದವಿನ ಶುಭಾ ಆಡಿಟೋರಿಯಂನಲ್ಲಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರಿಂದ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಪ್ರಶಸ್ತಿ ಸ್ವೀಕರಿಸಿದರು.
ಈ ವರ್ಷ ನಡೆಸಿದ ಅತ್ಯುತ್ತಮ ಚಟುವಟಿಕೆಗಳಿಗೆ ಈ ಪುರಸ್ಕಾರಗಳು ಜೆಸಿಐ ಬಂಟ್ವಾಳಕ್ಕೆ ಒಲಿದು ಬಂದಿದ್ದು, ಅತ್ಯುತ್ತಮ ಘಟಕಾಧ್ಯಕ್ಷ ರನ್ನರ್ ಅಪ್ ಪುರಸ್ಕಾರ, ಅತ್ಯುತ್ತಮ ವಿಭಿನ್ನ ಕಾರ್ಯಕ್ರಮ ರನ್ನರ್ ಅಪ್ ಪುರಸ್ಕಾರ, ಡೈಮಂಡ್ ಘಟಕ ಪುರಸ್ಕಾರ, ತರಬೇತಿ ವಿಭಾಗದ ಪುರಸ್ಕಾರ ಸೇರಿದಂತೆ ಒಟ್ಟು 9 ಪುರಸ್ಕಾರಗಳು ಜೆಸಿಐ ಬಂಟ್ವಾಳಕ್ಕೆ ಲಭಿಸಿದೆ.
ಈ ಸಂದರ್ಭ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ಕೆ., ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್, ಜೆಸಿಐ ಬಂಟ್ವಾಳದ ಕಾರ್ಯದರ್ಶಿ ರಶ್ಮಿ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಪೂರ್ವಾಧ್ಯಕ್ಷರಾದ ಸಂತೋಷ್ ಜೈನ್, ಸದಾನಂದ ಬಂಗೇರ, ಸದಸ್ಯರಾದ ಉಮೇಶ್ ಪೂಜಾರಿ, ಯೋಗೀಶ್ ಮೊಗರ್ನಾಡು ವೇದಿಕೆಯಲ್ಲಿದ್ದರು.
—