
ಎನ್. ಕೋಟ್ಯಪ್ಪ ಸಾಲ್ಯಾನ್ ನಿಧನ
ಬಂಟ್ವಾಳ: ಮಾರ್ನಬೈಲು ನಿವಾಸಿ ಎನ್. ಕೋಟ್ಯಪ್ಪ ಸಾಲ್ಯಾನ್(91) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗ್ರಹದಲ್ಲಿ ನಿಧನರಾದರು. ಮಾರ್ನಬೈಲು ನಾಗನವಳಚ್ಚಿಲ್ನ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇತ್ತೀಚೆಗೆ ನಡೆದ 50ನೇ ವರ್ಷಾಚರಣೆ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು 5ಗಂಡು ಹಾಗೂ 3 ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಭಾನುವಾರ ಪಾಣೆಮಂಗಳೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಕಾರ್ಯ ನಡೆಯಿತು.
