
ಬಂಟ್ವಾಳ: ಪ್ರತಿಷ್ಠಿತ ಬಂಟ್ವಾಳ ರೋಟರಿ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷರಾದ ಹಿರಿಯ ರೋಟರಿ ಸದಸ್ಯ ಬಸ್ತಿ ಮಾಧವ ಶೆಣೈ ಅವರು ರೋಟರಿ ಜಿಲ್ಲೆ 3181ರ 2027-28ನೇ ಸಾಲಿನ ಸಹಾಯಕ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
2027-28ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ಅವರು ಶೆಣೈ ಅವರನ್ನು ಈ ಮಹತ್ವದ ಜವಾಬ್ದಾರಿಗೆ ಆಯ್ಕೆ ಮಾಡಿದ್ದಾರೆ.
ರೋಟರಿ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶೆಣೈ ಅವರು ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ರೋಟರಿ ಪ್ರತಿಷ್ಠಾನದ ಮೇಜರ್ ಡೋನರ್ ಕೂಡ ಆಗಿದ್ದಾರೆ. ರೋಟರಿ ಸೇವೆಯ ಜೊತೆಗೆ ವಿವಿಧ ಸಮಾಜಮುಖಿ ಹಾಗೂ ಜನಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಸೇವೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಅವರ ಆಯ್ಕೆಗೆ ಬಂಟ್ವಾಳ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ವಲಯಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Advertisement







