
ಬಂಟ್ವಾಳ: ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ೨೫ನೇ ವಾರ್ಷಿಕೋತ್ಸವದ ಕಾರ್ಯಕ್ರಮ ರಜತ ಸಂಭ್ರಮ ಹಾಗೂ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಮೇ ೨೪ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಆಟೋಲೈನ್ಸ್ ಗ್ಯಾರೇಜ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ, ಕಾರ್ಯದರ್ಶಿ ರಾಜೇಶ್ ಕುಲಾಲ್, ಕೋಶಾಧಿಕಾರಿ ಭಾಸ್ಕರ ಕುಲಾಲ್, ಗೌರವ ಸಲಹೆಗಾರರಾದ ಸುಧಾಕರ ಸಾಲ್ಯಾನ್, ಅಣ್ಣುಪೂಜಾರಿ, ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ಸಿದ್ದೀಕ್ ಮೆಲ್ಕಾರ್, ಸತೀಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಸಂಘಟನಾ ಸಂಚಾಲಕ ಪ್ರಶಾಂತ್ ಭಂಡಾರ್ಕಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Advertisement







