
ಬಂಟ್ವಾಳ: ಇತ್ತೀಚೆಗೆ ನಿಧನರಾದ ಬಂಟ್ವಾಳ ತಾ.ಪಂ. ಮಾಜಿ ಸದಸ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಂದಾಳು ಸೋಮಪ್ಪ ಕೋಟ್ಯಾನ್ ಅವರ ಸಂತಾಪ ಸಭೆ ತುಂಬೆಯ ಶ್ರೀ ಶಾರದಾ ಸಭಾಭವನದಲ್ಲಿ ನಡೆಯಿತು.
ಸೋಮಪ್ಪ ಕೋಟ್ಯಾನ್ ಅವರ ಪುತ್ರರಾದ ಸಂತೋಷ್ ಕುಮಾರ್ ಹಾಗೂ ಸಂಪತ್ ಕುಮಾರ್ ಅವರು ದೀಪಪ್ರಜ್ವಲಿಸಿದರು. ಬಳಿಕ ಗಣ್ಯರು ಸೋಮಪ್ಪ ಕೋಟ್ಯಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನುಡಿನಮನ ಸಲ್ಲಿಸಿ ಸೋಮಪ್ಪ ಕೋಟ್ಯಾನ್ ಅವರು ಈ ಊರಿನ ಅಭಿವೃದ್ಧಿಯ ಬಗ್ಗೆ ಚಿಂತಿಸಿದವರು. ಊರಿನ ಅಭಿವೃದ್ಧಿಗಾಗಿ ಅನುದಾನಕ್ಕೆ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಇಡುತ್ತಿದ್ದರು.

ಅವರ ಉತ್ತಮ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಸೋಮಪ್ಪ ಕೋಟ್ಯಾನ್ ಕಲಾವಿದರಾಗಿ ನಾಟಕದಲ್ಲಿ ಅಭಿನಯಿಸಿದ್ದರು. ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.
ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ನುಡಿನಮನ ಸಲ್ಲಿಸಿ ಸೋಮಪ್ಪ ಕೋಟ್ಯಾನ್ ವ್ಯಕ್ತಿಗತವಾಗಿ ಆತ್ಮೀಯರಾಗಿದ್ದರು. ಊರಿನ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು ಎಂದು ತಿಳಿಸಿದರು.
ಮೈಸೂರು ಎಲೆಕ್ಟ್ರಿಕ್ ನ ಇಂಡಸ್ಟ್ರೀಸ್ ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳ್ಯಾರ್, ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು, ತುಂಬೆ ಪಂಚಾಯತಿ ಉಪಾಧ್ಯಕ್ಷ ಗಣೇಶ್ ಸಾಲ್ಯಾನ್, ಪ್ರಮುಖರಾದ ಪ್ರಕಾಶ್ಚಂದ್ರ ರೈ ದೇವಸ್ಯ, ಉದ್ಯಮಿ ಆದಂ ಉಚ್ಚಿಲ್ ತುಂಬೆ,
ಅನಿಲ್ ಪಂಡಿತ್, ಲೋಕನಾಥ ಶೆಟ್ಟಿ, ಪದ್ಮನಾಭ ಶೆಟ್ಟಿ,
ಎಂ.ಆರ್. ನಾಯರ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ
ಮಾಧವ ವಳವೂರು, ಹರೀಶ್ ಕೋಟ್ಯಾನ್ ಕುದನೆ, ಇರ್ಫಾನ್ ತುಂಬೆ,
ಜಗನ್ನಾಥ ಸಾಲ್ಯಾನ್, ಶೇಷಪ್ಪ ಮೂಲ್ಯ, ರಾಘವ ಬಂಗೇರ ಪೇರ್ಲಬೈಲು, ದಿವಾಕರ ಪೇರ್ಲಬೈಲು, ಸಂಜೀವ ಪೂಜಾರಿ
ಯೋಗೀಶ್ ಕೋಟ್ಯಾನ್, ವಿಜಯ್ ಕಜೆಕಂಡ, ಜಲಜಾಕ್ಷಿ ಕೋಟ್ಯಾನ್, ಹೇಮಲತಾ ಜಿ. ಪೂಜಾರಿ ಮತ್ತತರರು ಭಾಗವಹಿಸಿದ್ದರು. ತಾರಾನಾಥ ಕೊಟ್ಟಾರಿ ತೇವು ಕಾರ್ಯಕ್ರಮ ನಿರೂಪಿಸಿದರು.


Advertisement







