
ಬಂಟ್ವಾಳ: ಹದಿಹರೆಯ ಎನ್ನುವುದು ಕಾಲಘಟ್ಟ. ಮಕ್ಕಳ ಈ ಸಂಕ್ರಮಣ ಕಾಲವನ್ನು ನಿಭಾಸುವುದು ಪೋಷಕರಿಗೆ ಸವಾಲಿನ ಕೆಲಸ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಾಗುವ ಬದಲಾವಣೆಯನ್ನು ಅರ್ಥಮಾಡಿಕೊಂಡು ಅವರ ಸಾಗುವ ದಾರಿಯನ್ನು ಪೋಷಕರು ಅವಲೋಕಿಸುತ್ತಿರಬೇಕು ಎಂದು ಮನೋವೈದ್ಯ ಡಾ. ರವೀಶ್ ತುಂಗ ಹೇಳಿದರು.
ರೋಟರಿ ಕ್ಲಬ್ ಫರಂಗಿಪೇಟೆ ಇದರ ಆಶ್ರಯದಲ್ಲಿ ಅರ್ಕುಳ ಫರಂಗಿಪೇಟೆಯ ಶ್ರೀರಾಮ ವಿದ್ಯಾ ಸಂಸ್ಥೆ ಮತ್ತು ದೇರಳಕಟ್ಟೆ ಯೆನಪೋಯ ಫಿಸಿಯೋಥೆರಪಿ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದೊಂದಿಗೆ ಫರಂಗಿಪೇಟೆಯ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನಡೆದ ಹದಿಹರೆಯ ಎತ್ತ ಸಾಗುತ್ತಿದೆ? ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಪ್ರಸ್ತುತ ದಿನಗಳಲ್ಲಿ ಗಾಂಜ, ಮದ್ಯಪಾನದಂತೆ ಮೊಬೈಲ್ ಕೂಡ ಒಂದು ವ್ಯಸನವಾಗಿದೆ. ನಮ್ಮ ಅನುಕೂಲತೆಗಾಗಿ ಇರುವ ಮೊಬೈಲ್ ಇಂದು ಬದುಕನ್ನೇ ಕಸಿಯುತ್ತಿದೆ. ಆದ್ದರಿಂದ ಮೊಬೈಲ್ ಜೀವನ ಅಲ್ಲ. ಮೊಬೈಲ್ ಇಲ್ಲದೆ ಬದಕಲು ಸಾಧ್ಯವಿದೆ ಎಂದ ಅವರು ಇಂದು ಕುಟುಂಬ ಜೀವನ ಬದಲಾಗಿ ಮಕ್ಕಳಿಗೆ ಮಾರ್ಗದರ್ಶನದ ಕೊರತೆ ಎದುರಾಗುತ್ತಿದೆ ಎಂದು ತಿಳಿಸಿದರು.

ಯೇನಪೋಯ ಫಿಸಿಯೋಥೆರಪಿ ಕಾಲೇಜಿನ ಉಪಪ್ರಾಂಶುಪಾಲ ಡಾ.ಆಸಿರ್ ಜೋನ್ ಸ್ಯಾಮ್ಯುಯೆಲ್ ಮಾತನಾಡಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕ ಗೋವಿಂದ ಶೆಣೈ, ರೋಟರಿ ಕ್ಲಬ್ನ ಮಾಜಿ ಜಿಲ್ಲಾ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ
ಸಹಾಯಕ ಗವರ್ನರ್ ಪದ್ಮನಾಭ ರೈ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಜಯರಾಮ ಶೇಖ, ರೋಟರಿ ವಲಯ ಸೇನಾನಿ ಸುರೇಂದ್ರ ಕಂಬಳಿ, ರೋಟರಿ ಫರಂಗಿಪೇಟೆ ಅಧ್ಯಕ್ಷ ರಮೇಶ್ ಶೆಟ್ಟಿ ನಡಿಗುತ್ತು ಉಪಸ್ಥಿತರಿದ್ದರು.
ಯೇನಪೋಯ ವಿದ್ಯಾಸಂಸ್ಥೆಯ ವಿಶ್ವಂಭರ ರೈ ಸ್ವಾಗತಿಸಿದರು. ರೋಟರಿ ಕ್ಲಬ್ ಫರಂಗಿಪೇಟೆಯ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು. ಯೇನಪೋಯ ಫಿಸಿಯೋಥೆರಪಿ ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಧಿಕಾರಿಗಳಾದ ಡಾ.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿಫಾಲಿ ಸಹಕರಿಸಿದರು.
Advertisement







