
ಬಂಟ್ವಾಳ: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆ ವತಿಯಿಂದ ಪ್ರಥಮ ಬಾರಿಗೆ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಸಹಕಾರ ದೊಂದಿಗೆ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರಲ್ಲಿ ಜುಲೈ 20 ರಂದು ಆದಿತ್ಯವಾರ ನಡೆಯಲಿದೆ. ಶ್ರೀ ರಕ್ತೇಶ್ವರೀ ದೇವೀ ದೇವಸ್ಥಾನ ದ ಸೇವಾ ಸಮಿತಿ ಯ ಅಧ್ಯಕ್ಷ ವಿಶ್ವನಾಥ್ ಬಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ .

ಮುಖ್ಯ ಅತಿಥಿ ಯಾಗಿ ಉದ್ಯಮಿ ಬಿ. ಸಂಜೀವ ಪೂಜಾರಿ.
ಗುರು ಕೃಪಾ, ಅತಿಥಿಗಳಾಗಿ ಸ್ವರ್ಣೋದ್ಯಮಿ ಸುನೀಲ್ ಆಚಾರ್ಯ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ರಾದ ಮ್ಯಾಥ್ಯೂ ಫ್ರಾನ್ಸಿಸ್. ಡಿ ಕುನ್ಹಾ. ಸವಿತಾ ಅರುಣ್ ಪ್ರಕಾಶ್
ಅಭಿಲಾಶ್ ಭಟ್, ಜ್ಞಾನೇಶ್ ಜಿ ರಾವ್. ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ಭಾಗವಹಿಸಲಿದ್ದಾರೆ.


ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಐತಪ್ಪ ಪೂಜಾರಿ ವಹಿಸಲಿದ್ದು ,ಕ್ರೀಡಾಕೂಟ ದ ಮೇಲ್ವಿಚಾರಕರಾಗಿ ರಾಜೇಶ್ ಅಮಿನ್, ಸುಂದರ್ ಎನ್, ಜಯಶ್ರೀ ಹಾಗೂ ರಕ್ಷಕ ಶಿಕ್ಷಕ ಸಂಘದ ಎಲ್ಲಾ ಸದಸ್ಯರು, ಶಿಕ್ಷಕರು ಸಹಕರಿಸಲಿ ದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ,ಪೋಷಕರಿಗೆ, ಹಳೇ ವಿದ್ಯಾರ್ಥಿ ಗಳಿಗೆ ಮತ್ತು ಪೋಷಕರಿಗೆ ಓಟ, ಹಿಮ್ಮುಖ ಓಟ,ಹಾಳೆ ಓಟ, ಮೂರು ಕಾಲಿನ ಓಟ,ಜನ ಕಂಬಳ,ರಿಲೇ , ನಿಧಿ ಶೋಧ,ದಂಪತಿ ಓಟ, ತ್ರೋಬಾಲ್,ಮಡಕೆ ಒಡೆಯುವುದು,ಹಗ್ಗ ಜಗ್ಗಾಟ ಇನ್ನೂ ಅನೇಕ ಮನರಂಜನಾ ಆಟಗಳು ನಡೆಯಲಿದೆ.
Advertisement







