
ಬಂಟ್ವಾಳ: ರಾಷ್ಟ್ರಮಟ್ಟದ ಯುವ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಬಾರ್ಡರ್ ಸುರಕ್ಷಾ ಕವಚ ವಿಜ್ಞಾನ ಮಾದರಿಗೆ ಭಾರತದ ಯುವ ವಿಜ್ಞಾನಿ ೭ನೇ ಬಹುಮಾನವನ್ನು ಕಾರ್ಮೆಲ್ ಪದವಿ ಪೂರ್ವ ಕಾಲೇಜು ಮೊಡಂಕಾಪು ಇಲ್ಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೃಷ್ಣ ಪಡೆದಿರುತ್ತಾರೆ. ಕರ್ನಾಟಕ ರಾಜ್ಯದಿಂದ ಭಾಗವಹಿಸಿದ್ದ ಏಕೈಕ ವಿದ್ಯಾರ್ಥಿಯಾಗಿರುವ ಇವರು ಬಿ.ಸಿ.ರೋಡು ಸಂಚಯಗಿರಿಯ ಸತೀಶ್ ಹಾಗು ಜ್ಯೋತಿ. ಎಂ ಇವರ ಪುತ್ರ. ಇವರಿಗೆ ಉಪನ್ಯಾಸಕರಾದ ವಿವೇಕ್ ಪೈ ಹಾಗೂ ಸುಚಿತ್ ಪಿ. ಯು ಮಾರ್ಗದರ್ಶನ ನೀಡಿರುತ್ತಾರೆ.

Advertisement







