
ಬಂಟ್ವಾಳ: ಸಜೀಪ ಮೂಡ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪಣೋಲಿ ಬೈಲು ದೈವಸ್ಥಾನದ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ನಡೆಯಿತು.
ಶಾಸಕರು ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹಾಗು ಮಾಜಿ ಸಚಿವ ಬಿ. ರಮನಾಥ ರೈ ಉಪಸ್ಥಿತಿಯಲ್ಲಿ ಮಾಣಿಲ
ಶ್ರೀಧಾಮದ ಶ್ರೀ ಮೋಹನದಾಸ ಪರಮಹಾಸ ಸ್ವಾಮೀಜಿ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಮಾತನಾಡಿ ಸರ್ವಧರ್ಮಿಯರ ಪವಿತ್ರ ಕ್ಷೇತ್ರವಾಗಿರುವಂತಹ ಪಣೋಲಿ ಬೈಲು ಕ್ಷೇತ್ರದಲ್ಲಿ ಅನ್ನ ಛತ್ರ ನಿರ್ಮಾಣ ಗೊಂಡಿರುವುದರಿಂದ ಭಕ್ತದಿಗಳಿಗೆ ಅನುಕೂಲವಾಗಲಿದೆ. ಇಲ್ಲಿ ಇನ್ನಷ್ಟು ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ ಕಳೆದ 15 ವರ್ಷಗಳಿಂದ ಪಣೋಲಿಬೈಲು ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸುವ ಅವಕಾಶ ಸಿಕ್ಕಿದೆ. ಜಿಲ್ಲೆಯ ಎ
ಗ್ರೇಡ್ ದೇವಸ್ಥಾನದಲ್ಲಿ ಇದು ಒಂದಾಗಿದ್ದು
ತಾತ್ರಿಕ ಅಡೆತಡೆಯಿಂದ ಹಾಗೂ ಕೆಲವೊಂದು ಗೊಂದಲಗಳಿಂದ ಅನ್ನ ಛತ್ರ ಸ್ವಲ್ಪ ವಿಳಂಬವಾಗಿದೆ. ತಾಯಿ ತನಗೆ ಬೇಕಾದ ಕೆಲಸವನ್ನು ತನ್ನ ಭಕ್ತರಿಂದ ತಾನೇ ಮಾಡಿಸಿ ಕೊಳ್ಳುತಾರೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಾತಿ ಧರ್ಮ ಮತದ ಭೇದ ಮರೆತು ಜನರ ನಂಬಿಕೆಯ ಕ್ಷೇತ್ರವಾಗಿ ಪಣೋಲಿಬೈಲ್ ಬೆಳೆದು ಬಂದಿದೆ ಎಂದರು.
ಮಾಣಿಲ ಶ್ರೀದಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಾಚನ ನೀಡಿ ನಾವ್ಯಾರು ಶಾಶ್ವತ ಅಲ್ಲ.ಆದರೆ ಇಲ್ಲಿ ನೆಲೆಯಾಗಿರುವ ತಾಯಿ ಶಾಶ್ವತ. ಇಲ್ಲಿನ ಸೇವೆ ಶಾಶ್ವತ. ಇಲ್ಲಿರುವುದು ತಾಯಿ ನೀಡಿದ ಅಧಿಕಾರ. ಅದನ್ನು ಯಾರು ಕಸಿದು ಕೊಳ್ಳಲು ಸಾಧ್ಯವಿಲ್ಲ. ಇದು ಜಗತ್ತಿಗೆ ಬೆಳಕು ಕೊಡುವ ಸಾನಿಧ್ಯ ಎಂದು ತಿಳಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ. ಎಸ್ ಗಟ್ಟಿ,
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು
, ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಮಣ್ಯ ಭಟ್, ದೈವಸ್ಥಾನದ ಆಡಳಿತಧಿಕಾರಿ, ತಹಸೀಲ್ದಾರ್ ಮಂಜುನಾಥ್
ಕಾರ್ಯನಿರ್ವಾಹನಧಿಕಾರಿ, ಉಪ ತಹಸೀಲ್ದಾರ್ ದಿವಾಕರ್ ಮುಗುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.

ವಿವೇಕ್ ಶೆಟ್ಟಿ ನಗ್ರಿ ಗುತ್ತು ಸ್ವಾಗತಿಸಿದರು. ಪ್ರಾಸ್ತ್ರವಿಕವಾಗಿ ಮಾತನಾಡಿ ಸುಮಾರು ರೂ.2. 1 ಕೋಟಿ ವೆಚ್ಚದಲ್ಲಿ ಅನ್ನ ಛತ್ರ ಉದ್ಘಾಟನೆಯಾಗಿದ್ದು ಸಜಿಪ ಮೂಡದ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಎಂದರು. ಗಿರೀಶ್ ಕುಮಾರ್ ಪೆರ್ವ ವಂದಿಸಿದರು.ಶಿವಪ್ರಸಾದ್ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.
Advertisement







