
ಬಂಟ್ವಾಳ: ಪುದು ಗ್ರಾಮದ ಸುಜೀರು ದತ್ತ ನಗರದಲ್ಲಿರುವ ಶ್ರೀ ವೀರ ಹನುಮಾನ್ ಮಂದಿರದ ರಜತ ಮಹೋತ್ಸವ ಸಂಭ್ರಮ 2027 ಜ. 11ರಿಂದ ಜ.17ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ರಜತಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು ಭಾನುವಾರ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು ಮಾತನಾಡಿ ಮಂದಿರದ ರಜತಮಹೋತ್ಸವ ಸಂಭ್ರಮ ಯಶಸ್ವಿಯಾಗಿ ನಡೆಯಲ್ಲಿದ್ದು ಎಲ್ಲರು ಸಹಕಾರ ನೀಡುವಂತೆ ವಿನಂತಿಸಿದರು. ರಜತ ಸಂಭ್ರಮದ ಕಾರ್ಯಕ್ರಮ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ತಲುಪಿ ಸಂಕಲ್ಪಿಸಿದ ಕಾರ್ಯಗಳು ಕೂಡಿ ಬರಲಿ ಎಂದು ಆಶಿಸಿದರು.

ಗೌರವ ಸಲಹೆಗಾರ ಸದಾಶಿವ ಡಿ ತುಂಬೆ ಮಾತನಾಡಿ ಇಲ್ಲಿನ ಶ್ರೀ ವೀರ ಹನುಮಾನ್ ಮಂದಿರ ಇಷ್ಟು ಸುಂದರವಾಗಿ ರೂಪು ಗೊಳ್ಳುವಲ್ಲಿ ಇಲ್ಲಿನ ಯುವಕರ ಹಾಗೂ ಮಹಿಳೆಯರ ಅಪಾರವಾದ ಶ್ರಮ ಇದೆ. ಮುಂದೆ ನಡೆಯಲಿರುವ ರಜತ ಸಂಭ್ರಮದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು
ಪ್ರಮುಖರಾದ ನಿಶಿತ್ ಶೆಟ್ಟಿ ಸುಜೀರು ಗುತ್ತು, ಗೌರವ ಸಲಹೆಗಾರರಾದ ರಾಮಚಂದ್ರ ಬಂಗೇರ ಮಾರಿಪಳ್ಳ, ಅಶೋಕ್ ಶೆಟ್ಟಿ ಸುಜೀರ್ ಗುತ್ತು, ಪ್ರತಾಪ್ ಆಳ್ವ ಸುಜೀರು ಗುತ್ತು, ಸುಬ್ರಹ್ಮಣ್ಯ ರಾವ್ ನೆತ್ತರಕೆರೆ, ಪ್ರಧಾನ ಕಾರ್ಯದರ್ಶಿ ದಾಮೋದರ್ ಸಪಲ್ಯ ಸುಜೀರು, ರಜತಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ
ಮಾಲತಿ ಶೆಟ್ಟಿ ಹೊಸಮನೆ, ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷರಾದ ಸಂಜೀವ ಬೆಂಜನಪದವು, ಕಿಶೋರ್ ಕುಮಾರ್ ಸುಜೀರ್, ಬಾಬು ಪೂಜಾರಿ, ಯಶವಂತ ದೈಯ್ಯಡ್ಕ,ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ದತ್ತನಗರ, ಜಗದೀಶ್ ಕುಮ್ದೇಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅಮಿತಾ, ವಿಜಯ ಕುಲಾಲ್,ರಾಮಕೃಷ್ಣ ಪೂಜಾರಿ ದತ್ತನಗರ, ಸಂತೋಷ್ ಕೊಡಂಗೆ,ರವೀಂದ್ರ ದತ್ತನಗರ, ಸಂದೀಪ್ ದತ್ತನಗರ,ರಕ್ಷಿತ್ ದೆಯಡ್ಕ, ರಂಜಿತ್ ಶೆಟ್ಟಿ ಮಲ್ಲಿ,ದೀಪಕ್ ದೆಯಡ್ಕ,ಯಸ್ ಜಯ ಬೆಳ್ಳಾಡ ದತ್ತನಗರ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯದರ್ಶಿ ಗಣೇಶ್ ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
Advertisement







