
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ಲಿಯೋ ಕ್ಲಬ್ ಬಂಟ್ವಾಳ ಗೋಲ್ಡ್ ಇದರ ಆಶ್ರಯದಲ್ಲಿ ಲಯನ್ಸ್ ದೀಪಾವಳಿ ಸಂಭ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು
ಲಯನ್ಸ್ ಜಿಲ್ಲಾ ದೀಪಾವಳಿ ಸಂಭ್ರಮದ ಪ್ರಧಾನ ಸಂಯೋಜಕ ಗಣೇಶ್ ಡಿ. ಶೆಟ್ಟಿ ದೀಪಾವಳಿಯನ್ನು ಉದ್ಘಾಟಿಸಿದರು.
ಅವರು ಮಾತನಾಡಿ ಮುಂದಿನ ಜನಾಂಗಕ್ಕೆ ಸಾಂಪ್ರದಾಯಿಕ ದೀಪಾವಳಿಯನ್ನು
ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಕ್ಕಳಿಗೆ ಧರ್ಮ, ಸಂಸ್ಕೃತಿ ತಿಳಿಸುವುದರ ಜೊತೆಗೆ ಸಂಬಂಧಗಳ ಮಹತ್ವ ವನ್ನು ಕಲಿಸಿಕೊಡುವ ಕಾರ್ಯ ಆಗಬೇಕಾಗಿದೆ ಎಂದರು.
ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷೆ ಚಿತ್ರ ಎಡಪಾಡಿತ್ತಾಯ ಅಧ್ಯಕ್ಷತೆ ವಹಿಸಿ ದೀಪಾವಳಿ ಆಚರಣೆಯ ಮಹತ್ವ ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣೇಶ್ ಡಿ ಶೆಟ್ಟಿ, ಸರಿತಾ ಶೆಟ್ಟಿ ದಂಪತಿಯನ್ನು, ಶಿವಾನಂದ ಬಾಳಿಗೆ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿ ಪವನ್ ಶೆಟ್ಟಿ ಅವರಿಗೆ ಲ್ಯಾಪ್ಟಾಪ್ ಕೊಡುಗೆಯಾಗಿ ನೀಡಲಾಯಿತು. ದಾಸಕೋಡಿ ಅಂಗನವಾಡಿ ಗೆ ಕೊಡುಗೆಗಳನ್ನು ನೀಡಲಾಯಿತು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ಲಬ್ ಸದಸ್ಯರಾದ ಲೋಕನಾಥ್ ಶೆಟ್ಟಿ ಹಾಗೂ ರಾಧಾಕೃಷ್ಣ ಬಂಟ್ವಾಳ ಅವರನ್ನು ಅಭಿನಂದಿಸಲಾಯಿತು. ಗೂಡು ದೀಪ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಲಿಯೋ ಪದಾಧಿಕಾರಿಗಳು ಹಾಗೂ ಲಯನ್ ಸದಸ್ಯರು ಫ್ಯಾಷನ್ ಶೋ ನಡೆಸಿಕೊಟ್ಟರು. ಪ್ರಾಂತೀಯ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಅತಿಥಿಗಳನ್ನು ಪರಿಚಯಿಸಿದರು. ವಲಯಧ್ಯಕ್ಷ ಉಮೇಶ್ ಆಚಾರ್ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಸುಮಾ ಸುನಿಲ್, ಲಿಯೋ ಅಧ್ಯಕ್ಷೆ ಶ್ರೀಯಾಂಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷೆ ಚಿತ್ರ ಎಡಪಾಡಿತ್ತಾಯ ಸ್ವಾಗತಿಸಿ, ಕಾರ್ಯದರ್ಶಿ ಜಯಂತಿ ಮುಕುಂದ ಪ್ರಭು ವರದಿ ವಾಚಿಸಿದರು. ಪೂರ್ವಧ್ಯಕ್ಷ ಜಗದೀಶ್ ಎಡಪಡಿತ್ತಾಯ ವಂದಿಸಿದರು. ಸದಸ್ಯ ತಪೋಧನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Advertisement







