
ಬಂಟ್ವಾಳ: ಅಂಬೆಗಾಲಿಡುತ್ತಾ ಆಟವಾಡುವ ವಯಸ್ಸಿನಲ್ಲಿ ಈ ಪುಟ್ಟ ಪೋರಿ ಭಜನೆ ಗೀತೆಗಳನ್ನು ಹಾಡಿ, ಮಂತ್ರಗಳನ್ನು ಪಠಿಸಿ ಎಲ್ಲರ ಮನೆಸೂರೆಗೈದಿದ್ದಾಳೆ. ಸಣ್ಣ ವಯಸ್ಸಿನಲ್ಲಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿ ಅಚ್ಚರಿ ಮೂಡಿಸಿದ್ದಾಳೆ.
ಈ ಪುಟ್ಟ ಪೋರಿಯ ಹೆಸರು ಪ್ರಾದ್ಯಾ ವೈ. ಕುಲಾಲ್. ವಯಸ್ಸು 2.9 ವರ್ಷ. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಯಾದವ ಕುಲಾಲ್ ಹಾಗೂ ವಿಜಯ ದಂಪತಿ ಪುತ್ರಿ. ತೊದಲು ಮಾತುಗಳನ್ನಾಡುವ ಈ ಪುಟ್ಟ ವಯಸ್ಸಿನಲ್ಲಿ 4 ಮಂತ್ರ ಪಠಿಸಿ, ಕನ್ನಡ ಹಾಗೂ ತುಳುವಿನ 5 ಭಜನೆಗಳನ್ನು ಹಾಡಿ ಪ್ರಾದ್ಯಾ ಇಂಡಿಯಾ ಬುಕ್ ಆಪ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
Advertisement







