
ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ನಾಗರೀಕ ಕ್ರಿಯಾ ಸಮಿತಿ ಸೇವಾ ಟ್ರಸ್ಟ್ ಇದರ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.
ಪ್ರೊಫೆಸರ್ ಕೆ.ಪಿ. ಸೂಫೀ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಅವರು ಮಾತನಾಡಿ ಇದು ಕೇವಲ ಉದ್ಘಾಟನಾ ಸಮಾರಂಭವಲ್ಲ ಬದಲಾಗಿ ಸಾಧನೆಯ ಸಮಾವೇಶ.

ಸುರೇಶ್ ಬಂಗೇರ ಅವರ ನಾಯಕತ್ವ ಗುಣದಿಂದ ಸುಂದರ ಕಟ್ಟಡ ತಲೆ ಎತ್ತಿ ನಿಂತಿದೆ. ಇದೊಂದು ಎಲ್ಲರೂ ನೆನೆಪಿಟ್ಟುಕೊಳ್ಳುವ ಸ್ಮಾರಕವಾಗಲಿದೆ.. ಇದರ ಹಿಂದಿನ ಪರಿಶ್ರಮ ಅಭಿನಂದನೀಯ ಎಂದರು.
ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಸಂಚಯಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಹೃದಯ ಶ್ರೀಮಂತಿಕೆಯ ಸದಸ್ಯರ ಸಹಕಾರದಿಂದ ಈ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕ್ರೀಡಾ ಕಾರ್ಯದರ್ಶಿ ಸುಧಾಕರ ಸಾಲಾನ್ಯ್ ಮಾತನಾಡಿ ಸಂಚಯಗಿರಿ ನಾಗರಿಕರ ಕನಸಿನ ಸೌಧ ಇದಾಗಿದ್ದು ಎಲ್ಲಾ ಸದಸ್ಯರ ಸಹಕಾರದಿಂದ ಕಲಾವೇದಿಕೆ ಸುಂದರವಾಗಿ ರೂಪುಗೊಂಡಿದೆ ಎಂದರು.
ಸಂಘದ ಸದಸ್ಯರಾದ ಪುರಂದರ ಶೆಟ್ಟಿ, ಜಯಶ್ರೀ ಪ್ರತಿಮ್,
ಸಿ.ವಿ.ಶಂಕರ್, ವಿಠಲ್ ಭಂಡಾರಿ ಶುಭಾಶಂಸನೆಗೈದರು. ಬಡಾವಣೆಯ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ ಮಕ್ಕಳನ್ನು ಅಭಿನಂದಿಸಲಾಯಿತು. ನಾಗರೀಕ ಕ್ರಿಯಾ ಸಮಿತಿ ಸೇವಾ ಟ್ರಸ್ಟ್ ನ ಲೋಗೋ ರಚಿಸಿದ ದಿಶಾ ಭಟ್ ಅವರನ್ನು ಗೌರವಿಸಲಾಯಿತು. ಯೋಗ ಶಿಕ್ಷಕಿ ಪ್ರತಿಮಾ ಅವರನ್ನು ಗೌರವಿಸಲಾಯಿತು.

ನಾಗರೀಕ ಕ್ರಿಯಾ ಸಮಿತಿ ಸೇವಾ ಟ್ರಸ್ಟ್ ಗೌರವಾಧ್ಯಕ್ಚ ನರಸಿಂಹ ರಾಜ ಹೊಳ್ಳ, ಉಪಾಧ್ಯಕ್ಷೆ ತಾಯಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಧನಂಜಯ ಬಾಳಿಗ ಸ್ವಾಗತಿಸಿದರು. ಗೌರವ ಸಲಹೆಗಾರ ಎ.ದಾಮೋದರ ಸಂಚಯಗಿರಿ ವಂದಿಸಿದರು.
ಸತೀಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
Advertisement







