
ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೇರಮಜಲಿನ ಶ್ರೀ ಮಾತಾ ಲಕ್ಷಣಿ ಶಾಂತಿ ಧಾಮ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯರಿಗೆ ಹಣ್ಣು ಹಂಪಲು, ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ವಿವಿಧ ಕಾರಣಗಳಿಗೆ ಮಕ್ಕಳು, ಕುಟುಂಬ ಬಂಧುಗಳಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಜೀವಿಸುತ್ತಿರುವ ನೊಂದ ಹಿರಿಯ ಜೀವಗಳೊಂದಿಗೆ ಸಮಯ ಕಳೆಯುವ ಮೂಲಕ ಗ್ಯಾರೇಜು ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣಗೊಳಿಸಿದರು.

ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. 80ನೇ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ
ಮಾತಾ ಲಕ್ಷಣಿ ಶಾಂತಿ ಧಾಮ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವೃದ್ದರು, ನಿರ್ಗತಿಕರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಧ್ವನಿಯಾದರು. ಅವರಿಗೆ ಹಣ್ಣುಗಳನ್ನು ನೀಡಿ ಅವರ ಸಂಭ್ರಮದಲ್ಲಿ ಭಾಗಿಯಾದರು. ಹಿರಿಯ ಜೀವಗಳ ಕಷ್ಟ ಸುಖಗಳನ್ನು ಆಲಿಸಿ, ಸಾಂತ್ವಾನ ನೀಡಿದರು. ಈ ಸಂದರ್ಭ
ಆಶ್ರಮದ ಸಂಸ್ಥಾಪಕರಾದ ಹರೀಶ್ ಪೆರ್ಗಡೆಯವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಉಮೇಶ್ ಶೆಟ್ಟಿ, ಕೋಶಾಧಿಕಾರಿ ರಮೇಶ್ ಭಂಡಾರಿ, ನಿಕಟಪೂರ್ವಾಧ್ಯಕ್ಷ ಸುಧೀರ್ ಪೂಜಾರಿ, ಗೌರವ ಸಲಹೆಗಾರರಾದ ಸುಧಾಕಾರ ಸಾಲ್ಯಾನ್, ವಿಶ್ವನಾಥ ಬಿ., ಅಣ್ಣು ಪೂಜಾರಿ, ರಾಜೇಶ್ ಸಾಲ್ಯಾನ್, ಪ್ರಮುಖರಾದ ಪ್ರಶಾಂತ್ ಭಂಡರ್ಕಾರ್, ಭಾಸ್ಕರ ಕುಲಾಲ್, ರಾಜೇಶ್ ಕುಲಾಲ್, ವಿಜಯ್ ಕೊಟ್ಟಾರಿ, ರಾಜಾ ಚೆಂಡ್ತಿಮಾರ್ ಮತ್ತಿತರರ ಸದಸ್ಯರು ಉಪಸ್ಥಿತರಿದ್ದರು.
Advertisement







