
ಬಂಟ್ವಾಳ: ಸ್ನೇಹಕ್ಕೆ ಬದ್ದ, ಸಹಕಾರಕ್ಕೆ ಸಿದ್ಧ ಧ್ಯೇಯ ವಾಕ್ಯದೊಂದಿಗೆ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ನೆಹ ಮಿಲನ ಕಲ್ಲಡ್ಕ ಇದರ 12 ನೇ ವಾರ್ಷಿಕೋತ್ಸವ ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ನಡೆಯಿತು.
ನರಿಕೊಂಬು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಶಾಂತಿ ನರಿಕೊಂಬು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ನೇಹ ಮಿಲನದ ಅಧ್ಯಕ್ಷ ರವೀಂದ್ರ ಸಪಲ್ಯ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಣಿ ಗ್ರಾ.ಪಂ.ನಿಕಟ ಪೂರ್ವ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಉದ್ಯಮಿ ರವಿ.ಕೆ., ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಲೋಕನಂದ ಏಳ್ತಿಮಾರ್ ಭಾಗವಹಿಸಿದ್ದರು.

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ಉಚಿತ ಹೃದಯ ತಪಾಸಣಾ ಶಿಬಿರದ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ ಮಾತನಾಡಿ
ಸಮಾಜಸೇವೆಯ ಸೋಗಿನಲ್ಲಿ ಸ್ವಗಳಿಕೆ ಮಾಡುವ ಈ ಕಾಲಘಟ್ಟದಲ್ಲಿ ನೈಜವಾಗಿ ಸಮಾಜದ ಸೇವೆ ಮಾಡುವ ಸ್ನೇಹ ಮಿಲನದ ಕಾರ್ಯ ಶ್ಲಾಘನೀಯ. ಸ್ನೇಹ ಮಿಲನ ತಂಡದಿಂದ ಇನ್ನಷ್ಟು ಸಮಾಜ ಸೇವಾಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸ್ನೇಹ ಮಿಲನ ಸಂಘಟನೆಯಿಂದ ಅನೇಕ ಮಂದಿ ನೆರವು ಪಡೆದಿದ್ದು , ಅವರೆಲ್ಲರೂ ಉಪಕಾರ ಸ್ಮರಣೆ ಮಾಡುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾತನಾಡಿ ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು, ಕುಟುಂಬ ಸದಸ್ಯರು ಪಾಲ್ಗೊಂಡಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ. ಇಂದು ಯುವಸಮುದಾಯ ಹಾದಿ ತಪ್ಪುತ್ತಿದ್ದು
ದುಶ್ಚಟಮುಕ್ಯ ಸಮಾಜ ನಿರ್ಮಾಣದಂತಹ ಕಾರ್ಯದಲ್ಲೂ ಸ್ನೇಹ ಸಮ್ಮಿಲನ ಸಂಘಟನೆ ಮುಂದಡಿಯಿಡ ಬೇಕೆಂದರು.

ಸ್ನೇಹ ಮಿಲನದ ಅಧ್ಯಕ್ಷ ರವೀಂದ್ರ ಸಪಲ್ಯ ಅಧ್ಯಕ್ಷತೆ ವಹಿಸಿದ್ದರು. ಎಲ್ಲರ ಸಹಕಾರದಿಂದ ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಸಾಧ್ಯವಾಗಿದ್ದು ಹೃದಯ ತಪಾಸಣ ಶಿಬಿರಕ್ಕೂ ಸಹಕಾರ ನೀಡುವಂತೆ ವಿನಂತಿಸಿದರು.
ಸುಮಂಗಲ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿ ಶೈಲೇಶ್ ಶೆಟ್ಟಿ ಹಾಗೂ ಶ್ರುತಿ ಶೈಲೇಶ್ ದಂಪತಿಯನ್ನು ಸಾಧಕ ಸ್ನೇಹಿತ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೂತನ ಸದಸ್ಯರನ್ನು ಸಂಘಟನೆಗೆ ಸೇರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಸದಸ್ಯರಾದ ಜಯಪ್ರಕಾಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ರಾಮ್ ಪ್ರಸಾದ್ ರೈ ತಿರುವಾಜೆ ವಂದಿಸಿದರು. ಪ್ರಭಾಕರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಸದಸ್ಯರಿಗೆ ವಿವಿಧ ಒಳಾಂಗಣ ಕ್ರೀಡಾಕೂಟ ನಡೆಯಿತು.
Advertisement







