
ಬಂಟ್ವಾಳ: 2025-26 ನೇ ರೋಟರಿ ವರ್ಷದಲ್ಲಿ ಅಧ್ಯಕ್ಷ ರೊ. ಬಸ್ತಿ ಮಾಧವ ಶೆಣೈ ಅವರ ನೇತೃತ್ವದಲ್ಲಿ ದೊಡ್ಡ ಕ್ಲಬ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರೋಟರಿ ಕ್ಲಬ್ ಬಂಟ್ವಾಳಕ್ಕೆ ರೋಟರಿ ಜಿಲ್ಲೆಯ ಅತ್ಯುನ್ನತ “ಡೈಮಂಡ್ ಪ್ಲಸ್” ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೋಟರಿ ಪ್ರಭಾವವನ್ನು ಹೆಚ್ಚಿಸಿದ್ದಕ್ಕಾಗಿ, ವ್ಯಾಪ್ತಿಯನ್ನು ವಿಸ್ತರಿಸಿದ್ದಕ್ಕಾಗಿ, ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಉತ್ತಮಗೊಳಿಸಿದ್ದಕ್ಕಾಗಿ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ಪರಿಗಣಿಸಲಾಗಿದೆ.
ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ.
ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, 2027 -28 ರ ನಾಮ ನಿರ್ದೇಶಿತ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್, ಪೂರ್ವ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಮತ್ತು ಅಸಿಸ್ಟೆಂಟ್ ಜಿಲ್ಲಾ ಗವರ್ನರ್ ಜಯಕುಮಾರ್ ಶೆಟ್ಟಿ ಉಪಸ್ಥಿತಿಯಲ್ಲಿ ಕ್ಲಬ್ ಅಧ್ಯಕ್ಷ ರೊ. ಬಸ್ತಿ ಮಾಧವ ಶೆಣೈ ಪ್ರಶಸ್ತಿಯನ್ನು ಹಸ್ಥಾತರಿಸಿದರು.
ಈ ಸಂಧರ್ಭದಲ್ಲಿ ಕಾರ್ಯದರ್ಶಿ ರೊ. ಮೊಹಮ್ಮದ್ ಯಾಸೀರ್*, ಖಜಾಂಚಿ ರೊ. ಶಾಂತಿ ಪ್ರಕಾಶ್ ಡಿಸೋಜ, , ಹಾಗೂ ಸದಸ್ಯರಾದ ಡಾ. ರಮೇಶಾನಂದ ಸೋಮಯಾಜಿ, ಕೆ. ನಾರಾಯಣ ಹೆಗ್ಡೆ, ಬಿ. ರಿತೇಶ್ ಬಾಳಿಗಾ, ನವೀನ್ ಸಲ್ಡಾನ್ಹಾ, ಬೇಬಿ ಕುಂದರ್, ಪ್ರಕಾಶ್ ಬಾಳಿಗಾ, ಸದಾಶಿವ ಬಾಳಿಗಾ, ಜಯಪ್ರಕಾಶ್ ಜೆ ಎಸ್, ಸುರೇಂದ್ರ ಶೆನೋಯ್,ವಿದ್ಯಾಧರ ಜೈನ್, ರವಿಚಂದ್ರ ಬಂಟ್ವಾಳ ಮತ್ತು ಧನಂಜಯ ಬಾಳಿಗ ಉಪಸ್ಥಿತರಿದ್ದರು.


Advertisement







