
ಬಂಟ್ವಾಳ: ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಹಾಗೂ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ 136 ನೇ ರಕ್ತದಾನ ಶಿಬಿರ ಬಿ.ಸಿ ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿ ಸಮೀಪದ ಆರ್.ಕಾಂಪ್ಲೆಕ್ಸ್ ನ 2 ನೇ ಮಹಡಿಯಲ್ಲಿ ರವಿವಾರ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಕ್ತದಾನ ಶ್ರೇಷ್ಠ ದಾನ. ಅ ಮೂಲಕ ಜೀವ ರಕ್ಷಣೆಯ ಮಹಾನ್ ಕಾರ್ಯ ಈಡೇರಲು ಸಾಧ್ಯ ಎಂದು ಹೇಳಿದ ಅವರು ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಹಾಗೂ ಸೇವಾಂಜಲಿಯ ಕಾರ್ಯ ಮಾದರಿ ಎಂದು ಶ್ಲಾಘಿಸಿದರು.

ಮೊಡಂಕಾಪು ಚರ್ಚ್ ನ ಧರ್ಮಗುರು ವಂ.ಫಾ. ವಿಕ್ಟರ್ ಡಿಸೋಜ, ಅಮ್ಟಾಡಿ ಗ್ರಾ.ಪಂ. ನ ನಿಕಟಪೂರ್ವಾಧ್ಯಕ್ಷ ವಿಜಯ್ ಕುಮಾರ್, ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಮಾಲಕ ಪ್ರಶಾಂತ್ ಫ್ರಾಂಕ್, ಜೆಸಿಂತ ಜ್ಯೋತಿ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಮಾತನಾಡಿ ಕಳೆದ ಕೆಲವು ವರ್ಷದಿಂದ ರಕ್ತದಾನ ದ ಮಹಾನ್ ಕಾರ್ಯ ಸಾಕಾರವಾಗುತ್ತಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸೇವೆ ಸಲ್ಲಿಕೆಯಾಗುತ್ತಿದೆ ಎಂದರು.

ಸಿಂಗಲ್ ಡೋನರ್ ಆಫ್ ಪ್ಲೇಟ್ ಲೆಟ್ ಸಾಧಕ ಝುನೈದ್, ರಕ್ತದಾನಿಗಳಾದ ಸಂತೋಷ್ ಮೋನಪ್ಪ ಮಾರಿಪಳ್ಳ, ನೀಲನ್ ಡಿಸೋಜ ಪೆಲಪಾಡಿ, ಸುಕೇಶ್ ಶೆಟ್ಟಿ ತೇವು, ಪ್ರಶಾಂತ್ ಕುಮಾರ್ ತುಂಬೆ ಅವರನ್ನು ಸಮ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು ಸುಮಾರು 73 ಯುನಿಟ್ ರಕ್ತ ಸಂಗ್ರಹಿಸಲಾಯಿತು.


Advertisement







