
ಬಂಟ್ವಾಳ: ಇಲ್ಲಿನ ಜೆಸಿಐ ಬಂಟ್ವಾಳ ಈ ವರ್ಷ ನಡೆಸಿದ ವಿವಿಧ ಕಾರ್ಯಕ್ರಮಗಳಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಜೆಸಿಐ ಕಾಪುವಿನ ಆತಿಥ್ಯದಲ್ಲಿ ಕಾಪುವಿನ ಇನಾಸನ್ ಆಡಿಟೋರಿಯಂನಲ್ಲಿ ಭಾನುವಾರ ನಡೆದ ವಲಯದ ಮಧ್ಯಂತರ ಸಮ್ಮೇಳನ ಸಂಗಮದಲ್ಲಿ ಜೆಸಿಐ ಬಂಟ್ವಾಳದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅವರಿಗೆ ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.



ಅತ್ಯುತ್ತಮ ಘಟಕ ವಿನ್ನರ್, ಅತ್ಯುತ್ತಮ ಅಧ್ಯಕ್ಷ ರನ್ನರ್, ಡೈಮಂಡ್ ಸ್ಟಾರ್ ಪ್ರೆಸಿಡೆಂಟ್, ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್, ಪ್ರೋ ಪ್ರೆಸಿಡೆಂಟ್, ಲೇಬರ್ ಡೇ ಪ್ರೋಗ್ರಾಮ್ ಅವಾರ್ಡ್, ದಾನ್ ಪ್ರೋಗ್ರಾಮ್ ಅವಾರ್ಡ್, ಸೈಲೆಂಟ್ ಸ್ಟಾರ್ ಪ್ರೋಗ್ರಾಮ್ ಅವಾರ್ಡ್, ಸೇರಿದಂತೆ ಹಲವಾರು ಪುರಸ್ಕಾರಗಳು ಪ್ರಾಪ್ತವಾಗಿದೆ.
ಈ ಸಂದರ್ಭ ವಲಯಾಧಿಕಾರಿಗಳಾದ ಕಾಶೀನಾಥ್ ಗೋಗಟೆ, ಸುಹಾಸ್ ಮರಿಕೆ, ಜೆಸಿಐ ಬಂಟ್ವಾಳದ ಲೇಡಿ ಜೇಸಿ ಸಂಯೋಜಕಿ ಅನುಷಾ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.


Advertisement







