
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ರಜತ ಸಂಭ್ರಮ, ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
2026 ರಿಂದ 2028ನೇ ಸಾಲಿಗೆ ಅಧ್ಯಕ್ಷರಾಗಿ ಗಣೇಶ್ ಸುವರ್ಣ ತುಂಬೆ, ಕಾರ್ಯದರ್ಶಿಯಾಗಿ ಉಮೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ರಮೇಶ್ ಭಂಡಾರಿ ಆಯ್ಕೆಯಾಗಿದ್ದು ಅಧಿಕಾರ ಸ್ವೀಕರಿಸಿದರು.


ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಯಮಿ ಶಶಿಧರ ಪೈ ಉದ್ಘಾಟಿಸಿದರು. ಅವರು ಮಾತನಾಡಿ ಗ್ಯಾರೇಜು ಮಾಲಕರ ಸಂಘ ಬಲಿಷ್ಠವಾಗಿ ಬೆಳೆದಿದ್ದು ರಜತ ಸಂಭ್ರಮ ಆಚರಿಸುತ್ತಿರುವುದು ಅಭಿನಂದನೀಯ. ವೃತ್ತಿಯ ಜೊತೆಗೆ ಸಮಾಜ ಸೇವೆ ಮಾಡುತ್ತಿರುವುದು ಶ್ರೇಷ್ಠ ಕೆಲಸ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಕೀಲ ಅಶ್ವನಿ ಕುಮಾರ್ ರೈ ಮಾತನಾಡಿ ಕಾರ್ಮಿಕರಾಗಿ ಬಂದು ಇಂದು ಗ್ಯಾರೇಜು ಮಾಲಕರಾಗಿರುವುದು ನಿಜವಾದ ಸಾಧನೆ. ಗ್ಯಾರೇಜು ಮಾಲಕರಿಗೆ ಸಮಾಜದ ಮೇಲಿರುವ ಕಳಕಳಿ ಸೇವಾ ಕಾರ್ಯದಲ್ಲಿ ಎದ್ದು ಕಾಣುತ್ತಿದೆ. ಆ ಮೂಲಕ ಸಮಾಜದ ಋಣ ಸಂಧಾಯ ಮಾಡುವ ಕಾರ್ಯ ಅಭಿನಂದನೀಯ ಎಂದರು.

ಬಂಟ್ವಾಳ ಕಾರ್ಮಿಕ ನಿರೀಕ್ಷಕಿ ಲವೀನಾ ಡಿಸೋಜಾ, ಮಾತನಾಡಿ ಕಾರ್ಮಿಕ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಆದರ್ಶ್ ಎಂ. ಎಸ್. ಮಾತನಾಡಿ ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಮಕ್ಕಳಿಗೆ ವಾಹನ ಕೊಡುವವುದು ಅಪರಾಧ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿ ನೊಂದವರ ಸೇವೆ ಮಾಡಲು ಶ್ರೀಮಂತರಾಗಬೇಕೆಂದಿಲ್ಲ, ಹೃದಯ ಶ್ರೀಮಂತಿಕೆ ಇದ್ದರೆ ಸಾಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಹಾಗೂ ಗ್ಯಾರೇಜ್ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ರೀಡಾ ಸಾಧಕಿ ಸುಶ್ಮಿತಾ ಸೋಮನಾಥ ಸಾಲ್ಯಾನ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲೆಯ ಹಿರಿಯ ಮೆಕಾನಿಕ್ ಶೋಭಾನಂದ ಅವರನ್ನು ಗೌರವಿಸಲಾಯಿತು.
ತಾಲೂಕಿನ ಹಿರಿಯ ಮೆಕ್ಯಾನಿಕ್ ಸದಸ್ಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘದಿಂದ ಬಂಟ್ವಾಳ ವಲಯಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ನಿವೃತ್ತ ಯೋಧ ಸತೀಶ್ ಸುವರ್ಣ ಅವರನ್ನು ಗೌರವಿಸಲಾಯಿತು. ಸಂಘದ ನೂತನ ಅಧ್ಯಕ್ಷ ಗಣೇಶ್ ಸುವರ್ಣ ಮಾತನಾಡಿ ಸಂಘ ಯಶಸ್ವಿಯಾಗಿ ಮುನ್ನಡೆಯಲು ಎಲ್ಲರ ಸಹಕಾರ ಕೋರಿದರು.
ಉದ್ಯಮಿಗಳಾದ ಯೋಗೀಶ್, ಸಂಘದ ಜಿಲ್ಲಾಧ್ಯಕ್ಷ ದಿನಕರ ಕುಲಾಲ್, ದ.ಕ. ಗ್ಯಾರೇಜು ಮಾಲಕರ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಜಿಲ್ಲಾ ಸಂಘದ ನಿರ್ದೇಶಕ ಜೆ.ಪುಂಡಲೀಕ ಸುವರ್ಣ, ಜಿಲ್ಲಾ ಸಂಘದ ಜೊತೆ ಕಾರ್ಯದರ್ಶಿ ಅಬ್ದುಲ್ ಮೊಯಿದ್ದಿನ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಸಿದ್ದೀಕ್ ಮೆಲ್ಕಾರ್ ಸ್ವಾಗತಿಸಿದರು, ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ರಾಜೇಶ್ ಕುಲಾಲ್ ವರದಿ ವಾಚಿಸಿದರು,ಕೋಶಾಧಿಕಾರಿ ಭಾಸ್ಕರ್ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ರಂಗ ಕಲಾಚಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು

Advertisement







