
ಮಂಗಳೂರು: ಉಳ್ಳಾಲ ತಾಲೂಕಿನ ಸಂಪಿಗೆದಡಿ ಬಾಳಿಕೆಯಲ್ಲಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಬಳಿಯಿರುವ ಸಂಪಿಗೆದಡಿ ಮನೆತನಕ್ಕೊಳಪಟ್ಟ ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಗಳ ವಾರ್ಷಿಕ ಕೋಲ ಮಂಗಳವಾರ ರಾತ್ರಿ ನಡೆಯಿತು.
ಆರಂಭದಲ್ಲಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ರಂಗ ಪೂಜೆ ಜರುಗಿತು. ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ದೈವಸ್ಥಾನದಲ್ಲಿ ಶ್ರೀ ಕಲ್ಲುರ್ಟಿ ಹಾಗೂ ಪಂಜುರ್ಲಿ ವಾರ್ಷಿಕ ದೈವಗಳಿಗೆ ನೇಮೋತ್ಸವ ಜರುಗಿತು.


ಈ ಸಂದರ್ಭ ಸಂಪಿಗೆದಡಿ ಮನೆತನದ ರಾಜೀವ ಆಳ್ವ ಸಂಪಿಗೆದಡಿ, ರಾಜೇಶ್ ಬಂಗ, ವಿವೇಕ್ ಬಂಗ, ಭಾಸ್ಕರ್ ರೈ, ದೇವರಾಜ ರೈ, ನಂದರಾಮ ರೈ ಬಡಗಬೆಳ್ಳೂರು, ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ಗುತ್ತು ಮನೆತನದ ಪ್ರಮುಖರಾದ ವಿಖ್ಯಾತ್ ಬಳ್ಳಾಲ್ ಪರಿಯಾಳ ಗುತ್ತು, ಮೋಹನದಾಸ ರೈ ಡೆಬ್ಬೆಲಿಗುತ್ತು, ಮಹಾಬಲ ಹೆಗ್ಡೆ ಡೆಬ್ಬೆಲಿ, ರತ್ನಾಕರ ಕಾವ ಕುತ್ತಾರುಗುತ್ತು, ಜಯಶಾಂತ ಬೋಳ್ಯಾರು ಗುತ್ತು, ರವಿರಾಜ ರೈ ಎಲಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ದೈವಗಳ ಕೋಲ ವೀಕ್ಷಿಸಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

Advertisement







