ಬಂಟ್ವಾಳ: ದುರ್ಗೆ ನಮ್ಮೊಳಗಿನ ದುಃಖವನ್ನು ದೂರ ಮಾಡುವ ಶಕ್ತಿ. ಅಂತಹ ಜಗದಾಂಬಿಕೆಯ ಭವ್ಯವಾದ ಮಂದಿರ ಇಲ್ಲಿ ರೂಪುಗೊಂಡಿದೆ ಎಂದು ಬ್ರಹ್ಮಶ್ರೀ ಆನಂದ ಸಿದ್ದೀಪೀಠ ಮತ್ತು ಶ್ರೀ ಲಕ್ಷ್ಮೀ ಭೂವರಾಹ ಸ್ವಾಮೀ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಡಾ. ಮಹರ್ಷಿ ಆನಂದ ಗುರೂಜಿ ಹೇಳಿದರು.

ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು-ದೇವಿನಗರಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ
ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ನಡೆದ ಸುಧರ್ಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಜನರ ಪ್ರೀತಿ ಸಿಗುತ್ತಿರುವುದು ನನ್ನ ಜೀವನದ ಪುಣ್ಯ. ಆ ಕಾರಣಕ್ಕಾಗಿ ಇನ್ನಷ್ಟು ಧರ್ಮಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತಿರುತ್ತೇನೆ. ಪರಶುರಾಮ ಸೃಷ್ಟಿಯ ಕರಾವಳಿಯಲ್ಲಿ ನಿತ್ಯ ಧರ್ಮ ಕಾರ್ಯಗಳು ನಡೆಯುತ್ತಿರುವುದು ಅಭಿನಂದನೀಯ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಮಾತನಾಡಿ, ಹಿಂದೂ ಸಮಾಜದ ಮೇಲೆ ಆಕ್ರಮಣಗಳಾದಾಗ ಅಗೋಚರವಾದ ದೈವೀ ಶಕ್ತಿ ಹಾಗೂ ಗೋಚರವಾಗಿರುವ ಸನ್ಯಾಸಿಗಳ ತಪಶಕ್ತಿ ನಮನ್ನು ಕಾಪಾಡಿಕೊಂಡು ಬಂದಿದೆ.ನಮ್ಮ ದೇವಸ್ಥಾನಗಳ ಮೇಲೆ ಆಕ್ರಮಣಗಳಾದಾಗಲೂ ಸಂತ, ಮಹಂತರಿಂದಾಗಿ ಜನ ಜಾಗೃತರಾಗಿದ್ದರು. ಹಿಂದೂ ಸಮಾಜ ಮಾತ್ರ ಜಗತ್ತಿನ ಶಾಂತಿ ಕಾಪಾಡಲಿದೆ ಎಂದು ತಿಳಿಸಿದರು.


ಬಿಜೆಪಿ ನಾಯಕಿ ಸುಲೋಚನಾ ಜಿ.ಕೆ.ಭಟ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ,
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಹಿಂದೂಯುವ ಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ನ್ಯಾಯವಾದಿ ಜಗದೀಶ್ ಶೇಣವ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ,
ಆನಂದ ಗುರೂಜಿಯವರ ಪತ್ನಿ ಜಯಲಕ್ಷ್ಮಿ,
ಉದ್ಯಮಿ ಸಂದೇಶ ಶೆಟ್ಟಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ.,ಉದ್ಯಮಿಗಳಾದ ಜನಾರ್ದನ ಅರ್ಕುಳ,ಟಿ.ಕೃಷ್ಣ ಕುಲಾಲ್ ಶೇಡಿಗುರಿ,ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಬ್ರಹ್ಮರಕೊಟ್ಲು,ಮಾಜಿ ವಿ.ಪ.ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್,ಪಾಣೆಮಂಗಳೂರು ಸುಮಂಗಲಾ ಕ್ರೆ.ಕೋ.ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಸ್ವರ್ಣೋದ್ಯಮಿ ಸುನೀಲ್ ಆಚಾರ್ಯ, ವಿ.ಹಿಂ.ಪ ,ಬಜರಂಗದಳದ ಬಂಟ್ವಾಳ ಪ್ರಖಂಡದ ಮಾಜಿ ಅಧ್ಯಕ್ಷ ಪದ್ಮನಾಭ ಬಿ.,ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ,
ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ ಪಿಲಿಂಗಾಲು,ರಾಜೇಶ್ ಎನ್ ನೆಕ್ಕರೆ,ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷರಾದ ಮುರಳೀಧರ ಭಟ್ ಮಣಿಹಳ್ಳ,ಮೋಹನದಾಸ ಶೆಟ್ಟಿ ನಡ್ಯೋಡಿಗುತ್ತು, ಪ್ರ.ಕಾರ್ಯದರ್ಶಿ ಉಮಾಶಂಕರ್ ಪ್ರಸಾದ್ ಹನುಮಾನ್ ನಗರ,ಕರುಣೇಂದ್ರ ಪೂಜಾರಿ ಕೊಂಬರಬೈಲು, ಧಾರ್ಮಿಕ ಸಮಿತಿ ಸಂಚಾಲಕ ದಾಮೋದರ ಜೆ.ಡಿ.ಸ್ವಾಗತ ಸಮಿತಿ ಸಹಸಂಚಾಲಕ ಜೋಕಿಂ ಮಿನೇಜಸ್ ಮತ್ತಿತರರು ವೇದಿಕೆಯಲ್ಲಿದ್ದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ಪ್ರಸ್ತಾವನೆಗೈದು, ಸ್ವಾಗತಿಸಿದರು,ಪ್ರ.ಕಾರ್ಯದರ್ಶಿ ಸಂತೋಷ್ ಪೂಜಾರಿ ಪಾವರಿಪಲ್ಲ ವಂದಿಸಿದರು.ದಿನೇಶ್ ಸುವರ್ಣ ರಾಯಿಕಾರ್ಯಕ್ರಮ ನಿರೂಪಿಸಿದರು.
ಬಿಂಬ ಪ್ರತಿಷ್ಠೆ,ಬ್ರಹ್ಮಕಲಶ:-
ಇದಕ್ಕೂ ಮೊದಲುಇಜ್ಜ ಶಿವಕ್ಷೇತ್ರದ
ಶ್ರೀ ಸತ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ತಂತ್ರಿಗಳಾದ ವೇದಮೂರ್ತಿ ಶ್ರೀ ವಿದ್ಯಾಶಂಕರ ಭಟ್ ಅವರ ಮಾರ್ಗದರ್ಶನದಲ್ಲಿ ಶ್ರೀದೇವರ ಬಿಂಬ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪರಿವಾರ ದೇವತಾ ಕಲಶಾಭಿಷೇಕ ನೆರವೇರಿತು.

Advertisement







