
ಬಂಟ್ವಾಳ: ಬಿ.ಸಿ.ರೋಡ್ನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಕಿಂಡರ್ಗಾರ್ಟನ್ ಪದವಿ ಪ್ರದಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ನಾರಾಯಣ ಮೊಡಂಕಾಪು ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ, ಉಪಾಧ್ಯಕ್ಷರಾದ ಸುಂದರ್, ಕೋಶಾಧ್ಯಕ್ಷೆ ಜಯಶ್ರೀ, ಆಡಳಿತ ಮಂಡಳಿ ಸದಸ್ಯೆ ಆರತಿ ಅಮೀನ್ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಂಸ್ಥೆಗೆ ಸಹಕರಿಸಿದ ಪೋಷಕರು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಸ್ಮಾರ್ಟ್ ಟಿವಿ ಕಾಣಿಕೆಯಾಗಿ ನೀಡಲಾಯಿತು. ಬಳಿಕ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿ, ಶಿಕ್ಷಕಿ ಚೈತ್ರ ಧನ್ಯವಾದ ಸಲ್ಲಿಸಿದರು. ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಕುಮಾರಿ ಗೀತಾ, ಶ್ರೀಮತಿ ರಂಜಿನಿ, ಶ್ರೀಮತಿ ದಿವ್ಯಾ ಸಹಕರಿಸಿದರು. ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಿತು.

Advertisement







