
ಬಂಟ್ವಾಳ: ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಮೂರು ತರಗತಿ ಕೋಣೆಗಳಿಗೆ ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಟೈಲ್ಸ್ ಅಳವಡಿಸಲಾಗಿದ್ದು ನವೀಕೃತ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.


ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬಸ್ತಿ ಮಾಧವ ಶೈಣೈ ನವೀಕೃತ ತರಗತಿ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ನಡೆಸ ಸಮಾರಂಭದಲ್ಲಿ ಅವರು ಶುಭ ಹಾರೈಸಿದರು.

ವಲಯ ಸೇನಾನಿ ಪ್ರಕಾಶ್ ಬಾಳಿಗ, ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ಮಹಮ್ಮದ್ ಯಾಸೀರ್ ಕಲ್ಲಡ್ಕ, ನಿಯೋಜಿತ ಕಾರ್ಯದರ್ಶಿ ರವಿರಾಜ್ ಶೆಟ್ಟಿ , ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಹರ್ಷ, ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.
ಶಿಕ್ಷಕರಾದ ಗಣೇಶ್ ಸ್ವಾಗತಿಸಿದರು, ಬಾಲಕೃಷ್ಣ ಶೆಟ್ಟಿ ಖಂಡಿಗ ವಂದಿಸಿದರು, ಸುಲೋಚನಾ ಕುಮಾರಿ, ವೆಂಕಟರಮಣ ಆಚಾರ್ ಹಾಗೂ ಸಹಶಿಕ್ಷಕರು ಸಹಕರಿಸಿದರು.


Advertisement







